ಸೇಡಂ : ತಾಲೂಕಿನ ದೇವನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಶಾಮಕ ಅಧಿಕಾರಿಗಳಾದ ಬಸಪ್ಪ ಎಂ, ಶರಣಯ್ಯ ಗುತ್ತೇದಾರ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ನೇತೃತ್ವದಲ್ಲಿ ಅಗ್ನಿ ಅನಾಹುತದ ಬಗ್ಗೆ ಅಣಕು ಪ್ರದರ್ಶನ ನಡೆಸಿ ಉಪನ್ಯಾಸ ನೀಡಿದರು.
ಈ ಪ್ರದರ್ಶನದ ಮುಖಾಂತರ ಮಕ್ಕಳಿಗೆ ಬೆಂಕಿ ಅನಾಹುತ ಬಗ್ಗೆ ತಿಳುವಳಿಕೆ ಮೂಡಿಸಲಾಗಿದೆ ಎಂದು ಶಾಲಾ ಶಿಕ್ಷಕರು ಪತ್ರಿಕೆಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸಿ,ಆರ್,ಪಿ ಶರಣಬಸಪ್ಪ, ಶಾಲೆಯ ಮುಖ್ಯ ಗುರುಗಳಾದ ಗೋವಿಂದ ಧರಿ, ಎಸ್ಡಿಎಂಸಿ ಉಪಾಧ್ಯಕ್ಷರಾದ ರಾಜೇಶ್ವರಿ, ಗ್ರಾಮದ ಮುಖಂಡರಾದ ವೀರೇಶ್ ಪಾಟೀಲ್ ಮತ್ತು ಎಸ್ಡಿಎಂಸಿ ಸದಸ್ಯರಾದ ನರಸಪ್ಪ, ಹಣಮಂತ, ದೇವೇಂದ್ರ, ಹಣಮಯ್ಯ ಕಲಾಲ್ ಮತ್ತು ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




