ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ ರವರು ಪಂಚಾಯತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದಲ್ಲಿ ಅನೇಕ ಜನಪರ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಅವದಿಯಲ್ಲಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಾನುಗಳು ಹಾಗೂ ಚೇರ್ ಹಾಗೇಯೇ ಸರಕಾರಿ ಶಾಲೆಗೆ ಚೇರ್ ಗಳನ್ನು ಪಂಚಾಯತಿ ಅನುದಾನದ ಮೂಲಕ ನೀಡಿದ್ದಾರೆ .

ಗ್ರಾಮದ ಅಂಬೇಡ್ಕರ್ ಭವನ ಮತ್ತು ಲ್ಯಾಂಡ್ ಆರ್ಮಿ ಭವನದ ಮುಂದೆ ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದಾರೆ.
ಅದಲ್ಲದೇ ಇವಾಗ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಇಲ್ಲಿನ ಮಕ್ಕಳ ಹಿತದೃಷ್ಟಿಯಿಂದ ಇಂಟರ್ ಲ್ಯಾಕ್ ಕಲ್ಲುಗಳನ್ನು ನಾಲ್ಕು ಲಕ್ಷದ ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಿಸಿದ್ದಾರೆ ಇವರ ಕಾರ್ಯವನ್ನು ಗ್ರಾಮದ ಜನರು ಶ್ಲಾಘಿಸುತ್ತಿದ್ದಾರೆ ಇವರ ಕಾರ್ಯಕ್ಕೆ ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಿಡಿಒ ಮಹದೇವಸ್ವಾಮಿರವರು ಸಹಕಾರವನ್ನು ನೀಡಿದ್ದಾರೆ.
ಯಳಂದೂರು ತಾಲ್ಲೂಕಿನ ಯಾವುದೇ ಸರಕಾರಿ ಶಾಲೆಯ ಮೈದಾನದಲ್ಲಿ ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿಲ್ಲ ಆದರೆ ನಮ್ಮ ಶಾಲೆಯ ಆವರಣ ಇಂದು ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿದೆ ಇದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ.
ಈ ಕಾರ್ಯದಲ್ಲಿ ಗುರುಲಿಂಗಯ್ಯ ರವರಿಗೆ ಮತ್ತೊಬ್ಬ ಸದಸ್ಯ ಜೆ ಪ್ರಸಾದ್ ಕೂಡ ಕೈಜೋಡಿಸಿದ್ದಾರೆ.
ಏನೇ ಆಗಲಿ ಗ್ರಾಮ ಅಭಿವೃದ್ಧಿಯಾಗಬೇಕು ಅಷ್ಟೇ ಎಂದು ಗ್ರಾಮಸ್ಥರು ತಿಳಿಸಿದರು.
ವರದಿ: ಸ್ವಾಮಿ ಬಳೇಪೇಟೆ




