Ad imageAd image
- Advertisement -  - Advertisement -  - Advertisement - 

ನ್ಯಾಯಾಲಯದ ಆವರಣದಲ್ಲಿ ಮಾದರಿಯಾದ ಮಹಾಲಕ್ಷ್ಮಿ ಪೂಜೆ

Bharath Vaibhav
ನ್ಯಾಯಾಲಯದ ಆವರಣದಲ್ಲಿ ಮಾದರಿಯಾದ ಮಹಾಲಕ್ಷ್ಮಿ ಪೂಜೆ
WhatsApp Group Join Now
Telegram Group Join Now

ಯಾದಗಿರಿ:-ನಗರದಲ್ಲಿರುವ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಇದ್ದು’ ಸುಮಾರು ವರ್ಷಗಳಿಂದ ನಿತ್ಯ ಪೂಜಾ ಪುನಸ್ಕಾರಗಳು ಭಕ್ತಿಯ ಸೇವೆಗಳನ್ನು ನೀಡುತ್ತಿರುವ ನ್ಯಾಯಾಲಯದ ಆಡಳಿತ ವರ್ಗದ ಭಕ್ತ ವೃಂದ ಶ್ರಾವಣ ಮಾಸದ ಶುಭದಿನವಾದ

ವರಮಹಾಲಕ್ಷ್ಮಿ ಹಬ್ಬದ ಶುಕ್ರವಾರದಂದು ದೇವಸ್ಥಾನವನ್ನು ಭಯ ಭಕ್ತಿಯಿಂದ ಮಡಿ ನೀರಿನಿಂದ ಸ್ವಚ್ಛಗೊಳಿಸಿ ಬಗೆ ಬಗೆಯ ಹೂಗಳಿಂದ ಅಲಂಕಾರ ಗೊಳಿಸಿ ಗುಡಿ ಮುಂಭಾಗದಲ್ಲಿ ರಂಗು ರಂಗಿನ ರಂಗೋಲಿ ಕಣ್ಣಿಗೆ ಪಳ ಪಳನೆ ಹೊಳೆಯುವ ದೇವಿಯ ಗರ್ಭಗುಡಿ ಸುತ್ತ ಕಣ್ಣಿಗೆ ಕುಕ್ಕುವ ಜೀರೋ ಬಲ್ಪುಗಳು ಅಳವಡಿಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಂದು ಕುಟುಂಬದ ಸದಸ್ಯರು ಈ ಒಂದು ಭಕ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು

ಕೈಗೊಳ್ಳುವ ಜೊತೆಗೆ ಅಣ್ಣ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿರುವುದನ್ನು ನೋಡಿದರೆ ನಗರದ ಭಕ್ತ ಸಮೂಹಕ್ಕೆ ಮಾದರಿ ಆಗಿದ್ದಾರೆ ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಸಂಪ್ರದಾಯಕ್ಕೆ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ವಕೀಲರು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳ ವರ್ಗದವರು ಸ್ವತಃ ತಾವೆ ಸಂಪನ್ಮೂಲವನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಭಯ ಭಕ್ತಿಯಿಂದ ಇಂಥ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು

ಭಕ್ತಿಯ ಸಂಕೇತಕ್ಕೆ ಕಾರಣವಾಗಿದೆ ಪೂಜೆಗೆ ಆಗಮಿಸುವ ಪ್ರತಿಯೊಬ್ಬ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ ಏನೆ ಆಗಲಿ ಯಾದಗಿರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯ ದೇವತೆಯ ಪೂಜಿಸುವುದರ ಜೊತೆಗೆ ಲಕ್ಷ್ಮಿ ದೇವಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಚ್ಚುಕಟ್ಟಾಗಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿರುವುದು ವಿಶೇಷವಾಗಿದೆ ದೇವಿಗೆ ಮನೆಯಲ್ಲಿ ತಯಾರಿಸಿದ ಹೋಳಿಗೆ ಕಡಬು ಬಾಳೆ ಹಣ್ಣು ಕಿತ್ತಳೆ ಹಣ್ಣು ಸೇಬು ಪ್ಯಾರಲ ಇನ್ನು ಅನೇಕ ಹಣ್ಣು ಹಂಪಲುಗಳನ್ನು ನೈವಿದ್ಯ ಮಾಡಿ ಭಕ್ತಿಯ ಸಂಕೇತವಾಗಿರುತ್ತಾರೆ.

ಈ ಒಂದು ವೈಭವದ ವರಮಹಾಲಕ್ಷ್ಮಿ ಹಬ್ಬ ವೈಶಿಷ್ಟ್ಯತೆಯನ್ನು ಪಡೆದಿದೆ ಪ್ರತಿಯೊಂದು ಕುಟುಂಬದ ಮುತ್ತೈದ ಮಹಿಳೆಯರು ಅರಿಶಿಣ ಕುಂಕುಮ ಬಳೆ ಬಾಳೆಹಣ್ಣು ಜಂಪರ್ ಪೀಸ್ ಮುಂತಾದ ಧಾರ್ಮಿಕ ವಸ್ತುಗಳಿಂದ ತಮ್ಮ ಆತ್ಮೀಯ ಕುಟುಂಬಗಳ ಮನೆಗಳಿಗೆ ತೆರಳಿ ಮಹಾಲಕ್ಷ್ಮಿ ದೇವಿ ಪೂಜೆ ಮಾಡುವ ಮೂಲಕ ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬನ ಆಚರಿಸುತ್ತಾರೆ ಈ ಒಂದು ಕಾರ್ಯಕ್ರಮದಲ್ಲಿ ನ್ಯಾಯಾಲಯದ ಹಿರಿಯ ಅಧಿಕಾರಿಗಳು ವಕೀಲರು ಮಹಿಳಾ ಅಧಿಕಾರಿಗಳು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಅಧಿಕಾರಿ ವರ್ಗದವರು ಅವರ ಕುಟುಂಬಸ್ಥರು ಮುದ್ದು ಮಕ್ಕಳು ಮಹಿಳೆಯರು ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು

 ವರದಿ  :- ಮಲ್ಲಿಕಾರ್ಜುನ ದೋಟಿಹಾಳ 

WhatsApp Group Join Now
Telegram Group Join Now
Share This Article
error: Content is protected !!