ನವದೆಹಲಿ: ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿದ್ದು ಅವರಿಗೆ ದೇಶ ಮತ್ತು ವಿದೇಶಗಲ್ಲಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಸಲುವಾವಿ ವಿದೇಶಗಳೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ೪೫ ಸ್ಥಳಗಳಲ್ಲಿ ನಡೆದ ರೋಜಗಾರ್ ಮೇಳ ಉದ್ಧೇಶಿಸಿ ಮೋದಿ ಮಾತನಾಡಿದರು. ಭಾರತವು ಹಲವಾರು ದೇಶಗಳೊಂದಿಗೆ ವ್ಯಾಪಾರ ಮತ್ತು ಚಲನಶೀಲತೆ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ ಎಂದರು. ಈ ವ್ಯಾಪಾರ ಒಪ್ಪಂದಗಳು ದೇಶದ ಯುವಕರಿಗೆ ಹೊಸ ಅವಕಾಸಗಳನ್ನು ಸೃಷ್ಠಸುತ್ತಿವೆ ಎಂದರು.
ಹದಿನೆಂಟನೇ ರೋಜಗಾರ ಮೇಳದಲ್ಲಿ ಅವರು ವಿವಿಧ ಸರಕಾರಿ ಉದ್ಯೋಗಗಳಿಗೆ ೬೧,೦೦೦ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೇನ್ಸ್ ಮೂಲಕ ಪ್ರಧಾನಿ ಮೋದಿ ಹಸ್ತಾಂತರಿಸಿದರು.
ವ್ಯಾಪಾರ ಒಪ್ಪಂದಗಳು ಯುವಕರಿಗೆ ಹೊಸ ಅವಕಾಸ ಸೃಷ್ಠಿಸುತ್ತಿವೆ: ಪ್ರಧಾನಿ ಮೋದಿ




