ನವದೆಹಲಿ : ನದಿಯಲ್ಲಿ ಪುಣ್ಯಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗಲ್ಲ.. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ನರಕಕ್ಕೆ ಹೋಗಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪ್ರಯುಕ್ತ ಪ್ರಯಾಗ್ರಾಜ್ನಲ್ಲಿ ಇಂದು ಶಾ ಅವರು ನದಿಯಲ್ಲಿ ಪವಿತ್ರಾ ಸ್ನಾನ ಮಾಡಿದರು.
ಈ ಕುರಿತು ವ್ಯಂಗ್ಯವಾಗಿ ಟೀಕಿಸಿದ ಖರ್ಗೆ ಅವರು, ಸ್ನಾನ ಮಾಡಿದ ತಕ್ಷಣ ಮಾಡಿದ ಪಾಪಗಳು ತೊಳೆದು ಹೋಗಲ್ಲ. ಪಾಪಗಳಿಗೆ ಪರಿಹಾರವೂ ಸಿಗಲ್ಲ.. ಜನರ ಶಾಪದಿಂದ ಅವರು ಸೀದಾ ನರಕಕ್ಕೆ ಹೋಗಲಿದ್ದಾರೆ ಎಂದು ಖರ್ಗೆ ಅವರ ಹೇಳಿಕೆಯು ಇದೀಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಶಾ ಅವರು ತ್ರಿವೇಣಿ ಸಂಗಮದಲ್ಲಿ ಹಲವು ಹಿಂದೂ ಸಂತರು, ಸಾಧುಗಳೊಂದಿಗೆ ಪವಿತ್ರ ಸ್ನಾನ ಮಾಡಿ ದೇವರಿಗೆ ವಿವೇಶ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಅರಲಿ ಘಾಟ್ ತಲುಪಲು ದೋಣಿ ಸವಾರಿ ಮಾಡಿದರು.
ಈ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಶಾ ಅವರಿಗೆ ಸಾತ್ ನೀಡಿದರು. ಇತ್ತೀಚೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ರಾಜ್ಯದ ಹಿರಿಯ ಮುಖಂಡರೂ ಆಗಿರುವ ಕೇಂದ್ರದ ಮಂತ್ರಿ ವಿ.ಸೋಮಣ್ಣ ದಂಪತಿಯೂ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು.




