ಜಾರ್ಸುಗುಡ:ಒಡಿಶಾದಲ್ಲಿ ದೂರಸಂಪರ್ಕ, ರೈಲ್ವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 760,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದಾರೆ.
ಒಡಿಶಾದ ಜಾರ್ಸುಗುಡದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು, ದೇಶದಾದ್ಯಂತ ಎಂಟು ಐಐಟಿಗಳ ವಿಸ್ತರಣೆ ಸೇರಿದಂತೆ ಗುಜರಾತ್‌ನ ಸೂರತ್ ಜಿಲ್ಲೆಯ ಉಧ್ಯಾ ಮತ್ತು ಒಡಿಶಾದ ಬೆರ್ಹಾಂವುರದ ನಡುವೆ ಸಂಚರಿಸುವ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ಇದೇ ವೇಳೆ 21,400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 34 ಕಿ.ಮೀ. ದೂರದ ಕೊರಾಪುಟ್-ಬೈಗುಡ ರೈಲು ಮಾರ್ಗ ಮತ್ತು 82 ಕಿ.ಮೀ. ಮನಾಬರ್-ಕೊರಾಪುಟ್-ಗೋರಾಪುರ್ ವಿಭಾಗದ ರೈಲು ಮಾರ್ಗವನ್ನು ಅವರು ಉದ್ಘಾಟಿಸಿದ್ದಾರೆ.
ಬಿಎಸ್‌ಎನ್‌ಎಲ್‌ನ ‘ಸ್ವದೇಶಿ’ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ 97,500ಕ್ಕೂ ಹೆಚ್ಚು 4 ಜಿ ಟೆಲಿಕಾಂ ಟವರ್‌ಗಳು ಹಾಗೂ ಸಂಬಲುರ ನಗರದಲ್ಲಿ 4273 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೇಲೆ ತುವೆಯನ್ನು ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿ ಅವರು ನೀಡುತ್ತಿರುವ ಆರನೇ ಭೇಟಿ ಇದಾಗಿದೆ. 2018ರ ಸೆಪ್ಟೆಂಬರ್ 22ರಂದು ಮೋದಿ ಅವರು ಜಾರ್ಸುಗುಡದಲ್ಲಿಒಡಿಶಾದ ಎರಡನೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.




