ಬೆಂಗಳೂರು : ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇಂದು ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಜತೆಯಾಗಿ ಪ್ರಯಾಣಿಸಿದರು.
ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ ನಂತರ ಮೆಟ್ರೋ ಉದ್ಘಾಟನೆ ಮಾಡಲು ರಾಗಿಗುಡ್ಡಕ್ಕೆ ಬಂದರು.
ಈ ಸಂದರ್ಭದಲ್ಲಿ ಮೋದಿ ಯಾವುದೇ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಈ ಮಾತನ್ನು ಕೇಳಿ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಬಿದ್ದು ಬಿದ್ದು ನಕ್ಕಿದ್ದಾರೆ.
ಕರ್ನಾಟಕಕ್ಕೆ ಹೆಚ್ಚು ಒತ್ತುಕೊಡಬೇಕು ಎಂದಾಗ, ಸಾರ್ವಜನಿಕರು, ಹಾಗೂ ರಾಜ್ಯ ನಾಯಕರು ನಕ್ಕಾಗ, ಸಿಎಂ ಕೂಡಾ ಏನ್ರೀ ಎಲ್ಲ ನಗ್ತಿದೀರಿ ಎಂದು ಪ್ರಶ್ನೆ ಮಾಡಿ ನಗೆ ಬೀರಿದರು. ಭಾಷಣದ ಬಳಿಕ ಪ್ರಧಾನಿ ಬಳಿ ಕುಳಿತುಕೊಳ್ಳುವಾಗಲೂ ಸಣ್ಣ ಮಾತುಕತೆಯನ್ನು ನಡೆಸಿ ಪ್ರಧಾನಿ ಮುಖದಲ್ಲೂ ನಗು ತರಿಸಿದರು.




