ವಾಷಿಂಗ್ಟನ್ : 2023ರಲ್ಲಿ ಬೈಡನ್ ಪತ್ನಿಗೆ ನೀಡಿದ್ದ ಭಾರತೀಯ ವಜ್ರ ಅತ್ಯಂತ ಬೆಲೆ ಬಾಳುವ ಉಡುಗೊರೆಯಾಗಿದೆ ಎಂದು ಯುಎಸ್ ರಾಜ್ಯ ಇಲಾಖೆ ತಿಳಿಸಿದೆ.
ವಿದೇಶಿ ಅಧಿಕಾರಿಗಳಿಂದ US ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳ ವಾರ್ಷಿಕ ಲೆಕ್ಕಪತ್ರವನ್ನು ಪ್ರಕಟಿಸಿದೆ.ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಯುಎಸ್‌ನ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಇದು 2023ರಲ್ಲಿ ಅತ್ಯಂತ ದುಬಾರಿ ಉಡುಗೊರೆಯಾಗಿದೆ. ಇದರ ಬೆಲೆ 20,000 ಡಾಲರ್ (17 ಲಕ್ಷಕ್ಕಿಂತ ಹೆಚ್ಚು ರೂ.) ಎಂದು ತಿಳಿಸಿದೆ.
ಮೋದಿ ಅವರು ಜೋ ಬೈಡೆನ್ ಅವರಿಗೆ ಶ್ರೀಗಂಧದ ಪೆಟ್ಟಿಗೆ, ಪ್ರತಿಮೆ, ಎಣ್ಣೆ ದೀಪ ಮತ್ತು ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಇವೆಲ್ಲವೂ 6,232 ಡಾಲರ್ ಮೌಲ್ಯದ್ದಾಗಿದೆ. US ಅಧಿಕಾರಿಗಳಿಗೆ ಸುಮಾರು 35,000 ಡಾಲರ್ ಮೌಲ್ಯದ ಉಡುಗೊರೆಗಳನ್ನು ನೀಡಿದ್ದರು ಎಂದು ರಾಜ್ಯ ಇಲಾಖೆ ತಿಳಿಸಿದೆ.