ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವ್ರು ಭಾರತದ ಸಂವಿಧಾನವನ್ನ ಓದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದ ಬುಡಕಟ್ಟುಗಳು, ದಲಿತರು ಮತ್ತು ಬಡವರ ಬಗ್ಗೆ ಯಾರು ಮಾತನಾಡಿದರೂ ಅವರ ಮೈಕ್ ಆಫ್ ಆಗುತ್ತದೆ. ಆದ್ರೆ, ನೀವು ಬಯಸಿದಷ್ಟು ಮೈಕ್ ಆಫ್ ಮಾಡಬಹುದು, ನಾನು ಮಾತನಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.
ಗೋಡೆಯು ದಲಿತರು, ಆದಿವಾಸಿಗಳು, ಒಬಿಸಿಗಳ ಹಾದಿಯನ್ನ ತಡೆಯುತ್ತದೆ; ಮೋದಿ, ಆರ್ಎಸ್ಎಸ್ ಆ ಗೋಡೆಯನ್ನು ಬಲಪಡಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.