ಬೀದರ : ಕಾರ್ಮಿಕ ಖಾತೆಯ ಸಚಿವ ಸಂತೋಷ ಲಾಡ ಇವರು ಬೀದರ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಮಿತ್ರರೋಂದಿಗೆ ಮಾತನಾಡಿದರು.
ಇವತ್ತು ದೇಶದ ಪ್ರಧಾನ ಮಂತ್ರಿಗಳು ಬಿಹಾರ ಚುನಾವಣೆ ಪ್ರಯುಕ್ತ ಪ್ರತಿ ವೋಟ್ ಗೆ ಮಹಿಳೆಯರಿಗೆ 10 ಸಾವಿರ ಕೊಡ್ತೇನೆ ಅಂತ ಹೆಳಿ ನಮ್ಮ ಗ್ಯಾರಂಟಿ ಹಿಡಿದುಕೊಂಡು ತಿರುಗಾಡ್ತಾ ಇಲ್ವಾ ಇದು ನಮ್ಮ ಸರ್ಕಾರದ ಕಾಪಿ ಅಲ್ವಾ ಎಂದು ಹೇಳಿದರು.
ಬಿಟ್ಟಿಭಾಗ್ಯ ಅಂತ ನಿಮ್ಮ ಸಚಿವ ಅರ. ವಿ ದೇಶಪಾಂಡೆ ಹೇಳ್ತ ಇದ್ದಾರೆ ಅಂದಮೇಲೆ ತಮ್ಮ ನಿಲುವು ಯಾವುದು ಎಂದು ಮಾಧ್ಯಮ ಮಿತ್ರರ ಪ್ರಶ್ನೆ ಮಾಡಿದಾಗ
ಮಾಧ್ಯಮ ಮಿತ್ರರಿಗೆ ಉತ್ತರ ನೀಡಿಡ ಸಚಿವ ಲಾಡ್ ಅವರು ನೋಡಿ ಅವರು ಮುಖ್ಯಮಂತ್ರಿ ಆಗಿದ್ದೆ ಆದ್ರೆ ಇಂತಹ ಯೋಜನೆ ತರುತ್ತಿಲ್ಲ ಅಂದಿದ್ದಾರೆ ಇದು ಅವರ ವಯಕ್ತಿಕ ನಿಲುವು.
ದೇಶಕಂಡ ಅಪ್ರತ್ತಿಮ ನಾಯಕ ಸರ್ದಾರ ವಲ್ಲಭ ಭಾಯ್ ಪಟೇಲರು ಆರ್ ಎಸ್ ಎಸ್ ವಿರೋಧ ಮಾಡಿದ್ದು ಇತಿಹಾಸ ತಾವು ಮರೆತಿರಿ ಎಂದ್ರು
ಈ ದೇಶದ ಪ್ರತಿಯೊಬ್ಬ ನಾಗರಿಕರು ದೇಶಪ್ರೇಮಿಗಳೇ ಆರ್ ಎಸ್ ಎಸ್ ನಲ್ಲಿದ್ರೆ ಮಾತ್ರ ದೇಶಭಕ್ತಿ ಅನ್ನೋದು ಸುಳ್ಳು ಇಲ್ಲಿ 145 ಕೋಟಿ ಜನ ದೇಶ ಭಕ್ತರು ಇದ್ದಾರೆ ಎಂದರು.
ವರದಿ:ಸಂತೋಷ ಬಿಜಿ ಪಾಟೀಲ




