ಬಿಹಾರ : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತಿದ್ದು, ಅಮಾಯಕರನ್ನು ಕೊಂದು ಹಾಕಿದ ಪಾಪಿ ಉಗ್ರರಿಗೆ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದರು.
ಮದುಬನಿಯಲ್ಲಿ ಮಾತನಾಡಿದ ಅವರು, ಕಲ್ಪನೆಗೂ ಮೀರಿದ ರೀತಿ ಪ್ರತ್ಯುತ್ತರವನ್ನು ಪಾಕ್ಗೆ ಕೊಡುತ್ತೇವೆ. ರಕ್ತಪಿಪಾಸುಗಳನ್ನು ಸುಮ್ಮನೇ ಬಿಡುವುದಿಲ್ಲ. ಹುಡುಕಿ ಹೊಡೆದುರುಳಿಸುತ್ತೇವೆ ಎಂದರು.
ಉಗ್ರ ಕೃತ್ಯವನ್ನು ಇಡೀ ಭಾರತ ಖಂಡಿಸುತ್ತದೆ. ಕ್ರಿಮಿಗಳ ಸಂಹಾರಕ್ಕೆ ಸಕಲ ಕ್ರಮ ಕೈಗೊಂಡಿದ್ದೇವೆ. ಊಹಿಸಲಾಗದಂತಹ ಶಿಕ್ಷೆ ಆಗೋದು ಖಚಿತ ಎಂದು ಪ್ರಧಾನಿಯವರು ಶಪಥ ಮಾಡಿದರು.
ಇಡೀ ದೇಶ ಭಯೋತ್ಪಾದಕರ ವಿರುದ್ಧ ಇದೆ. ಮೃತರ ಕುಟುಂಬದ ಜೊತೆ ಇಡೀ ದೇಶ ನಿಲ್ಲಲಿದೆ. ಶಾಂತಿ, ಸುರಕ್ಷತೆ ವಿಚಾರದಲ್ಲಿ ಭಾರತ ರಾಜಿ ಮಾತೇ ಇಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.