ಕಲಬುರ್ಗಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ಗಂಭೀರವಾದ ಆರೋಪ ಮಾಡಿದ್ದು, ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಅದನ್ನು ಕೆಡವಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ಲಾನ್ ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.
ಇಂದು ಕಲಬುರ್ಗಿಯಲ್ಲಿ ಯೋಚನೆ ಮಾಡಿದ ಉದ್ಯೋಗ ಮೇಳದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ.
ನಿಮ್ಮ ನಿಮ್ಮ ನಡುವೆ ಏನೇ ಮನಸ್ತಾಪವಿದ್ದರು ಕೂಡ ಒಗ್ಗಟ್ಟಾಗಿ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ. ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಖರ್ಗೆ ಕಿವಿ ಮಾತು ಹೇಳಿದ್ದಾರೆ.
ಹುಷಾರಾಗಿರಬೇಕು ಮೋದಿ ಕರ್ನಾಟಕ ಸರ್ಕಾರ ಬೀಳಿಸುವ ಪ್ಲಾನ್ ಮಾಡಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರಗಳಿವೆ ಯಾವ ರೀತಿಯಾಗಿ ಕೆಡುವ ಬೇಕು ತೆಗೆದು ಹಾಕಬೇಕು ಅಧಿಕಾರ ಕೈಯಲ್ಲಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅದೇ ಪ್ರಯತ್ನ ನಮ್ಮ ಕರ್ನಾಟಕದಲ್ಲಿ ನಡೆದಿದೆ.
ನಮ್ಮವರು ಹುಷಾರು ಆಗಿರಬೇಕು ನಿಮ್ಮಲ್ಲಿ ಯಾವುದೇ ಬೇಧ ಭಾವ ಆಗಿರಲಿ ಒಂದಾಗಿರಬೇಕು ಇಲ್ಲವಾದರೆ ಮೋದಿ ಸರ್ಕಾರ ತೆಗೆದುಹಾಕುತ್ತಾರೆ. ಬಡ ಜನರನ್ನು ನುಂಗುತ್ತಾರೆ. ರಕ್ಷಣೆಗಾಗಿ ರಾಜ್ಯದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಹುಷಾರಾಗಿರಿ ಎಂದು ಕಿವಿಮಾತು ಹೇಳಿದ್ದಾರೆ.