Ad imageAd image

ಸುದ್ದಿಗೋಷ್ಟಿ ನಡೆಸದ ಮೋದಿ ನಮ್ಮ ಜೊತೆ ಚರ್ಚೆಗೆ ಬರುತ್ತಾರಾ..? : ಪ್ರಿಯಾಂಕ್ ಖರ್ಗೆ

Bharath Vaibhav
ಸುದ್ದಿಗೋಷ್ಟಿ ನಡೆಸದ ಮೋದಿ ನಮ್ಮ ಜೊತೆ ಚರ್ಚೆಗೆ ಬರುತ್ತಾರಾ..? : ಪ್ರಿಯಾಂಕ್ ಖರ್ಗೆ
PRIYANKA KHARGE
WhatsApp Group Join Now
Telegram Group Join Now

ಬೆಂಗಳೂರು : ಸುದ್ದಿಗೋಷ್ಟಿ ನಡೆಸಲಾಗದ ಪ್ರಧಾನಿ ಮೋದಿ ನಮ್ಮ ಜೊತೆ ಚರ್ಚೆಗೆ ಬರುತ್ತಾರಾ..? ಸಚಿವ ಪ್ರಿಯಾಂಕ್ ಖರ್ಗೆನಾನು ಎಂದಿಗೂ ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾತನಾಡಿಲ್ಲ, ನಿಂದನೆ ಮಾಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಯಾವ ಸಂದರ್ಭ ಬಂದರೂ ದಾಖಲೆ ಮುಂದಿಟ್ಟುಕೊಂಡು ಮಾತನಾಡಿದ್ದೇನೆ, ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಆದರೆ ನಾನು ನೇರವಾಗಿ ಮಾತನಾಡುವ ಕಾರಣಕ್ಕೆ ಬಿಜೆಪಿಯವರಿಗೆ ತೊಂದರೆಯಾಗುತ್ತಿದೆ.

ಏಕೆಂದರೆ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದೇವೆ ಎಂದು ಆರೆಸ್ಸೆಸ್ನವರಿಗೆ ರಿಪೋರ್ಟ್ ಕಾರ್ಡ್ ಕೊಡಬೇಕಿರುತ್ತದೆ. ಅವರು ದಾಖಲೆ ಇಟ್ಟುಕೊಂಡು ಎಂದಿಗೂ ಮಾತನಾಡಿಲ್ಲ, ಅಥವಾ ನನ್ನ ದಾಖಲೆಗಳನ್ನು ತಿರಸ್ಕರಿಸಿಯೂ ಇಲ್ಲ.

ಮೋದಿ ಅವರು 11 ವರ್ಷದಲ್ಲಿ ಸುದ್ದಿಗೋಷ್ಠಿಯನ್ನೇ ನಡೆಸಿಲ್ಲ, ಇನ್ನು ದೇಶದ ಪ್ರಗತಿ ಕುರಿತು ಚರ್ಚೆಗೆ ಬರುತ್ತಾರೆಯೇ? ಮನ್ ಕಿ ಬಾತ್, ಸಂಸತ್ ಅಥವಾ ಕೆಂಪುಕೋಟೆ ಭಾಷಣದ ಹೊರತಾಗಿ ಯಾವುದರಲ್ಲಿ ಭಾಗವಹಿಸಿದ್ದಾರೆ.

ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಅವರು ಬಹಳ ತಾರ್ಕಿಕವಾದ ಅನುಮಾನಗಳನ್ನು ಹಂಚಿಕೊಂಡಿದ್ದಾರೆ. ಇವಿಎಂ ಯಂತ್ರಗಳ ಎಥಿಕಲ್ ಹ್ಯಾಕಥಾನ್ ನಡೆಸುವಂತೆ ನಾನು ಚುನಾವಣಾ ಆಯೋಗಕ್ಕೆ ಆಹ್ವಾನ ನೀಡಿದ್ದೇನೆ.

ಯಾವ ಯಾವ ತಾಂತ್ರಿಕ ದೋಷ ಇರಬಹುದು, ಜನರ ಅನುಮಾನಗಳೇನು, ಹಾಗೆಯೇ ಆಯೋಗವು ಸುಪ್ರೀಂ ಕೋರ್ಟ್ಗೆ ನೀಡಿದ ದಾಖಲೆಗಳ ಆಧಾರದಲ್ಲಿ ಪತ್ರ ಬರೆದಿದ್ದೇನೆ. ಆದರೆ ಅವರಿಂದ ಉತ್ತರ ಬಂದಿಲ್ಲ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!