Ad imageAd image

ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ, ಸಮೀಕ್ಷೆ ಸುಳ್ಳಾಗಲ್ಲ : ನಟ ಚೇತನ್ 

Bharath Vaibhav
ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ, ಸಮೀಕ್ಷೆ ಸುಳ್ಳಾಗಲ್ಲ : ನಟ ಚೇತನ್ 
WhatsApp Group Join Now
Telegram Group Join Now

ಮಡಿಕೇರಿ: ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಯಾವತ್ತಿಗೂ ತಪ್ಪಾಗೋದಿಲ್ಲ. ಎನ್ ಡಿಎ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಅಂತ ನಟ ಚೇತನ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು 2014-2019ರಲ್ಲಿ ಇದ್ದ ಮೋದಿ ಅಲೆ ಈಗ ಇಲ್ಲ.ಮೋದಿ ಬ್ರ್ಯಾಂಡ್ ಕಡಿಮೆ ಆಗಿರಬಹುದು. ಆದ್ರೇ ಬಿಜೆಪಿಗೆ ದೊಡ್ಡ ಮಟ್ಟದ ಫಲಿತಾಂಶ ಬರಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯದ ನಂತ್ರ ಚುನಾವಣೋತ್ತರ ಸಮೀಕ್ಷೆಗಳ ವರದಿಯನ್ನು ನೋಡಿದ್ರೇ, ಎಲ್ಲಾ ಸಮೀಕ್ಷೆ ಒಂದೇ ರೀತಿಯಲ್ಲಿ ಇದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಸಮೀಕ್ಷೆಗಳು ಯಾವತ್ತಿಗೂ ತಪ್ಪಾಗುವುದಿಲ್ಲ ಎಂದರು.

2004ರ ಸಮೀಕ್ಷೆಯಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಸ್ಥಾನ ಬರಲಿದೆ ಎಂಬುದಾಗಿ ಹೇಳಲಾಗಿತ್ತು. ಅದರಂತೆಯೇ ಆಯ್ತು. ಈಗ ಚುನಾವಣೋತ್ತರ ಸಮೀಕ್ಷೆಯಲ್ಲಿ 2019ರ ಚುನಾವಣೆಗಿಂತ ಹೆಚ್ಚು ಸ್ಥಾನ ಬರಲಿದೆ ಅಂತ ಸಮೀಕ್ಷೆಗಳು ಹೇಳಿದ್ದಾವೆ. ಅದೇ ರೀತಿ ಫಲಿತಾಂಶ ಬರಲಿದೆ ಎಂದರು.

ಲೋಕಸಭಾ ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಾರ 370ಕ್ಕೂ ಹೆಚ್ಚು ಸ್ಥಾನ ಎನ್ ಡಿಎ ಗೆಲ್ಲಲಿದೆ ಎಂಬುದಾಗಿ ಹೇಳಿವೆ. ಅದರಂತೆ ಸ್ಥಾನ ಬರಲಿದೆ.

ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ಥಿತ್ವಕ್ಕೆ ಬಂದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ಆ ಬಗ್ಗೆ ಜೂನ್.4ರ ಫಲಿತಾಂಶದ ನಂತ್ರ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!