Ad imageAd image

ಹಿಂದೂ ಮುಸ್ಲಿಂ ಸೋದರತೆಯ ಬಾಂಧವ್ಯದ ಹಬ್ಬವೇ ಮೊಹರಂ

Bharath Vaibhav
ಹಿಂದೂ ಮುಸ್ಲಿಂ ಸೋದರತೆಯ ಬಾಂಧವ್ಯದ ಹಬ್ಬವೇ ಮೊಹರಂ
WhatsApp Group Join Now
Telegram Group Join Now

ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹೊಡೆಬೀರನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರನಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬ ವಿಜೃಂಭಣೆಯಿಂದ ಆಚರಿಸುತ್ತಾರೆ.

ಇಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಥಮ ಮಾಸವಾದ ಮೊಹರಂ ತಿಂಗಳ ಹಬ್ಬವನ್ನು ಮರನಳ್ಳಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಲ್ಲಾ ಜಾತಿ ಭೇದ ಮರೆತು ಭಾವೈಕ್ಯತೆಯೊಂದಿಗೆ ಆಚರಿಸಿ, ಧರ್ಮ-ಸಾಂಸ್ಕೃತಿಕ ಐಕ್ಯತೆ ಮೆರೆಯುತ್ತಾರೆ ಬೆಳಿಗ್ಗೆಯಿಂದಲೇ ಮರನಳ್ಳಿಯಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ  ಸುಲೇಪೇಟ,ಹೊಡೆಬೀರನಳ್ಳಿ,ಕುಪನೂರ,ಭಂಟನಳ್ಳಿ, ಬೇನಕನಳ್ಳಿ,ಗ್ರಾಮಗಳಿಂದ ಮೊಹರಂ ಪೀರ್ ಗಳ ದರ್ಶನ ಪಡೆಯಲು ಭಕ್ತರು ನೆರೆದಿರುತ್ತಾರೆ.ಮೆರವಣಿಗೆಯ ನೂರಾರು ಭಕ್ತರು ಪಾಲ್ಗೊಂಡು ನಗಾರಿ ವಾದ್ಯಗಳ ಮೂಲಕ ಭಕ್ತರು ಮೆರವಣಿಗೆಯೊಂದಿಗೆಯೇ ಹಿಂದೂ ಮುಸ್ಲಿಂ ಸಹೋದರರು ಸಹ ಸಕ್ರಿಯವಾಗಿ ಪಾಲ್ಗೊಂಡು ದರ್ಗಾದಲ್ಲಿ ವಿಶೇಷ ದುವಾ. ಪ್ರಾರ್ಥನೆ, ಹಾಗೂ ಧಾರ್ಮಿಕ ಉಪನ್ಯಾಸಗಳು ನಡೆದವು. ದರ್ಗದ ಅಸಗರ್ ಸಾಹೇಬ್‌ ಮಾರ್ಗದರ್ಶನದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹನಶೀಲತೆ ಕುರಿತ ಸಂದೇಶ ನೀಡಲಾಯಿತು.ಮೊಹರಂ ಹಬ್ಬ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಇದು ಎಲ್ಲ ಧರ್ಮದ ಜನರ ನಡುವೆ ಸಹಾನುಭೂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ.

ಪೂರ್ವಸಿದ್ಧತೆ, ಶಿಸ್ತು, ಶಾಂತಿ ಹಾಗೂ ಸಹಕಾರದಿಂದ ಈ ವರ್ಷದ ಮೊಹರಂ ಹಬ್ಬವು ಅತ್ಯಂತ ಯಶಸ್ವಿಯಾಗಿ ನೆರವೇರಿದಿದೆ ಎಂದು ಹೊಡೆಬೀರನಳ್ಳಿ ಗ್ರಾಮದ ಹಿರಿಯರಾದ ಕಲ್ಲಾ ರೆಡ್ಡಿ ಸಂತೋಷ ವ್ಯಕ್ತಪಡಿಸಿದರು.ಸುಲೇಪೇಟ ಪೊಲೀಸ್ ಠಾಣೆ ವತಿಯಿಂದ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು.

ಈ ಸಂದರ್ಭದಲ್ಲಿ ಹೊಡೆಬೀರನಳ್ಳಿ ಗ್ರಾಮದಿಂದ ಹಿರಿಯರಾದ ಮೈನೋದ್ದಿನ್ ಅಜಮೇರ್, ಅಲಿಮೋದ್ದಿನ್ ಪಟೇಲ್ ಅನೀಲರೆಡ್ಡಿ,ವಿನೋದ್ ಓಂಕಾರ, ಮುಬೀನ್ ಪಟೇಲ್, ಪಾಶಮಿಯ್ಯ ಮೊರನಳ್ಳಿ, ಸುಲೇಪೇಟ ಗ್ರಾಮದಿಂದ‌ ಮಿನಾಜ್‌ ಪಟೇಲ್, ಖಮರೋದ್ದಿನ್ ಪಟೇಲ್, ಖಾದರ್ ಚಿತ್ತಾಪುರ,ರುದ್ರಮುನಿ ರಾಮತೀರ್ಥಕರ್, ಕುಪನೂರ ಗ್ರಾಮದಿಂದ ಮೌಲಾ, ಭೀಮಶಂಕರ,ಶಕೀಲ್,ಅಸ್ಲಂ ಸಾಬ, ಬೇನಕನಳ್ಳಿಯಿಂದ ಶಕೀಲ್ ಹಾಗೂ ಯುವಕರು, ಮಕ್ಕಳೂ ಸೇರಿ ಎಲ್ಲರು ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!