Ad imageAd image

ನಿಟ್ಟೂರು ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಮೊಹರಂ ಆಚರಣೆ.

Bharath Vaibhav
ನಿಟ್ಟೂರು ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಮೊಹರಂ ಆಚರಣೆ.
WhatsApp Group Join Now
Telegram Group Join Now

ಸಿರುಗುಪ್ಪ : ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಎಲ್ಲಾ ಜನಾಂಗದ ಬಾವೈಕ್ಯತೆಯಿಂದ ಮೊಹರಂ ಹಬ್ಬವು ಅದ್ದೂರಿಯಾಗಿ ಜರುಗಿತು.ಹಬ್ಬಗಳನ್ನು ಒಂದಾಗಿ ಆಚರಿಸುವುದು ಇಲ್ಲಿನ ವಿಶೇಷವೆಂದು ಹೇಳಬಹುದಾಗಿದೆ.

ಪೀರಲ ಹಬ್ಬವೆಂದೇ ಕರೆಯುವ ಈ ಮೊಹರಂ ಹಬ್ಬವು ಗ್ರಾಮದಲ್ಲಿ ತಲೆತಲಾಂತರಗಳಿಂದ ಯಾವುದೇ ಅಹಿತಕರ ಘಟನೆಗಳಿಲ್ಲದೇ ಭಾವೈಕ್ಯತೆಯಿಂದ ನಡೆದುಕೊಂಡು ಬಂದಿದೆ.

ಹಬ್ಬದ ಆಚರಣೆಗೆ ಮುಖಂಡರಿಂದ ಎಲ್ಲಾ ಮನೆಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ.ಇಲ್ಲಿ ಮುಸ್ಲೀಂ ಕುಟುಂಬಗಳೇ ಇಲ್ಲದಿದ್ದರೂ ಪಕ್ಕದ ಗ್ರಾಮಗಳಲ್ಲಿನ ಒಂದು ಮುಸ್ಲೀಂ ಕುಟುಂಬವನ್ನು ಪ್ರಾರ್ಥನೆ ಮತ್ತು ಆಚರಣೆಗೆಂದು ಗ್ರಾಮಕ್ಕೆ ಕರೆತಂದು ಹಬ್ಬವನ್ನು ಆಚರಿಸಲಾಗುತ್ತಿದೆ.

ಹತ್ತು ದಿನಗಳ ಕಾಲ ನಡೆಯುವ ಹಬ್ಬಕ್ಕೆ ವಿವಿಧ ಕಾರಣಗಳಿಂದ ದೂರದ ನಗರಗಳಿಗೆ ದುಡಿಮೆಗೆಂದು ಹೋಗಿರುವ ಎಲ್ಲಾ ಜನರು ಕಡ್ಡಾಯವಾಗಿ ಆಗಮಿಸಿ ತಮ್ಮ ಮನೆಗಳಿಗೆ ಸುಣ್ಣ ಬಣ್ಣ ಹಚ್ಚಿ ಮನೆಯನ್ನು ಅಲಂಕರಿಸುತ್ತಾರೆ.

ಮೊಹರಂ ಆರಂಭದಿಂದ ಅಲಾಯಿ ಕುಣಿ ಅಗೆಯುವುದು, ಪೀರಲ ದೇವರುಗಳನ್ನು (ಕೂರಿಸುವುದು) ಪ್ರತಿಷ್ಟಾಪಿಸುವುದು, ಕಟ್ಟಿಗೆ ಸಂಗ್ರಹಿಸಿ ತರುವುದು, ಕುಣಿಗೆ ಬೆಂಕಿ ಹಾಯಿಸುವುದು ಹಾಗೂ ದೇವರುಗಳ ಮೆರವಣಿಗೆ ಕಾರ್ಯಗಳು ಜರುಗುತ್ತವೆ.ಈ ಹಬ್ಬದಲ್ಲಿ ಮನೆಮನೆಯ ಸಣ್ಣ ಮಕ್ಕಳಿಗೆ ಕೆಂಪು ದಾರಗಳನ್ನು ಹಾಕಿ ಪಕ್ಕೀರಸ್ವಾಮಿಗಳೆಂದು ಕರೆಯಲಾಗುತ್ತದೆ.

ನೈವೇದ್ಯದ ಮೊದಲ ಪೂಜೆ ಇವರಿಗೆ ಸಲ್ಲಿಸಲಾಗುತ್ತದೆ. ಮಕ್ಕಳನ್ನು ದೇವರಾಗಿ ಕಾಣಲಾಗುತ್ತದೆ.ಪೀರಲ ಹಬ್ಬದ ಏಳನೇ ದಿನ ಹಾಗೂ ಒಂಬತ್ತನೇ ದಿನದಂದು ತಪ್ಪಡಿ ವಾದ್ಯಗಳೊಂದಿಗೆ ಮಸೀದಿಗೆ ಆಗಮಿಸಿ ದೇವರಿಗೆ ಬೆಲ್ಲದ ಹಾಲು, ಸಜ್ಜೆ ರೊಟ್ಟಿ, ಕೆಂಪು ಸಕ್ಕರೆಯನ್ನು ನೈವೇದ್ಯವನ್ನು ಸಮರ್ಪಿಸಿದರು.

ಇದೇ ವೇಳೆ ಹರಕೆ ಹೊತ್ತ ಭಕ್ತರು ತಮ್ಮ ಇಚ್ಚಾನುಸಾರ ಗಾತ್ರದ ಬೆಳ್ಳಿ ಕುದುರೆ, ತೊಟ್ಟಿಲು, ಇನ್ನಿತರ ಕಾಣಿಕೆಗಳನ್ನು ಅರ್ಪಿಸಿದರು.

ಗ್ರಾಮದ ಮುಖ್ಯ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಯುವಕರು ಮತ್ತು ಚಿಣ್ಣರಿಗೆ ಇದೊಂದು ಸಂಭ್ರಮಾಚರಣೆಯಂತೆ ಕಂಡು ಬಂದಿತು.

ಎಲ್ಲಾ ಜನಾಂಗದ ಯುವಕರು ಜೊತೆಗೂಡಿ ತಮ್ಮ ತಮ್ಮ ಮಕ್ಕಳು, ಸಹೋದರರು, ಅಲಾಯಿ ಕುಣಿಯುವುದನ್ನು ನೋಡುವುದೇ ಮಹಿಳೆಯರಿಗೆ ಒಂದು ಮನರಂಜನೆಯಾಗಿರುತ್ತದೆ.

ಹಿರಿಯರಿಗಂತೂ ಇದೊಂದು ಶ್ರದ್ದಾಭಕ್ತಿಯ ಧಾರ್ಮಿಕ ಆಚರಣೆಯೆಂದು ಹೇಳಬಹುದಾಗಿದೆ. ಗ್ರಾಮದ ಇನ್ನಿತರ ಎಲ್ಲಾ ದೇವಸ್ಥಾನಗಳಿಗೆ ಕಾಯಿ ಕರ್ಪೂರ ಸಲ್ಲಿಸುವುದು. ಹಬ್ಬವು ಸುವ್ಯವಸ್ಥಿತವಾಗಿ ಜರುಗಲೆಂದು ಪೂಜೆ ಸಲ್ಲಿಸಲಾಗುತ್ತದೆ.

ಬೀದಿಗಳಲ್ಲಿ ಪೀರಲ ದೇವರುಗಳ ಮೆರವಣಿಗೆ ಮಾಡಿಸುವ ಜವಾಬ್ದಾರಿಯಾಗಿರುತ್ತದೆ. ಕೊನೆಯ ದಿನದಂದು ಎಲ್ಲಾ ಗ್ರಾಮಸ್ಥರ ಸಹಕಾರದೊಂದಿಗೆ ಪೀರಲ ದೇವರುಗಳ ಮೆರವಣಿಗೆ ನಡೆಸಿ ನದಿ ದಂಡೆಯಲ್ಲಿ ವಿಸರ್ಜನೆ ಮಾಡಲಾಯಿತು.

ವರದಿ : ಶ್ರೀನಿವಾಸ ನಾಯ್ಕ. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!