ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನ ಬಿ ಕೆ ಹಳ್ಳಿ ಗ್ರಾಮದಲ್ಲಿ ದಿನಾಂಕ.8/07/25 ಮಂಗಳವಾರ ರಂದು ಮೊಹರಂ ಹಬ್ಬ ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಮುಸ್ಲಿಂ ಬಾವೈಕತೆಯ ಅದ್ದೂರಿಯಾಗಿ ಮೊಹರಂ ಹಬ್ಬವು ಅತಿ ವಿಜೃಂಭಣೆಯಿಂದ ಜರುಗಿತು.
5 ದಿನಗಳ ಕಾಲ ಗ್ರಾಮದ ಪಂಚಾಯತಿಯಲ್ಲಿ ದೇವರನ್ನು ಕೂರಿಸಿ ಪ್ರತಿ ದಿನ ಹೆಜ್ಜೆ ಕುಣಿತಗಳು ಹಾಗೂ ಈ ಬಾರಿ ವಿಶೇಷವಾಗಿ ಗ್ರಾಮದಲ್ಲಿ ಇರುವ ಗ್ರಾಮಸ್ಥರು ಹಿರಿಯ ನಾಗರಿಕರು ಕುಣಿತ ಹಾಗೂ ಬಿ ಕೆ ಹಳ್ಳಿ ಗ್ರಾಮದ ಯುವಕರ ಹೆಜ್ಜೆ ಕುಣಿತ ಗ್ರಾಮಸ್ಥರ ಗಮನ ಸೆಳೆದಿತ್ತು ಕೊನೆಯ ದಿವಸ ಗ್ರಾಮದಲ್ಲಿ ಗ್ರಾಮಸ್ಥರು ಬೆತ್ತಸು ಹಾರಿಸಿ ದೇವರ ಆಶೀರ್ವಾದ ಪಡೆದುಕೊಂಡು ನಂತರ ಸಂಪ್ರದಾಯ ಪ್ರಕಾರ ದೇವರು ನದಿಗೆ ಹೋಗುವುದು ನದಿಯ ದಂಡೆಯಲ್ಲಿ ಮುಸ್ಲಿಂ ಸಮಾಜದವರು ತಂದ ಚೊಂಗೆ ನೈವೈದ್ಯ ಅರ್ಪಿಸಿ ನದಿ ತಟದಲ್ಲಿ ಇದ್ದ ಗ್ರಾಮಸ್ಥರಿಗೆ ಪ್ರಸಾದವನ್ನು ಹಂಚಿ ಮೊಹರಂ ಹಬ್ಬವನ್ನು ಮುಕ್ತಾಯ ಮಾಡಿದರು.
ಈ ವೇಳೆಯಲ್ಲಿ, ಬುಡಾನ್ ಸಾಬ್. ಚಂದ ಬಾಸ್. ಮಾಜಿ ಗ್ರಾಂ ಪಂ ಅಧ್ಯಕ್ಷರು ರಾಮಲಿಂಗಪ್ಪ. ಮೂಲಗಿರಿಯಪ್ಪ. ಸಿದ್ದಂಗರಿ ಗೋಪಾಲಪ್ಪ. ರಾಮಪ್ಪ. ಪಾಲಂ ಮುತ್ಯಾಲಪ್ಪ. ದಾಸರಿ ವೆಂಕಟೇಶ್. Sc ಪ್ರಕಾಶ್. ಮುರಳಿ ಕೃಷ್ಣ. ರಾಮಾಂಜಿ. ರಫೀಕ್. ರಸುಲ್. ಇನ್ನು ಮುಂತಾದ ಬಿ ಕೆ ಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಶಿವಾನಂದ




