ಬಾಗಲಕೋಟೆ:ಪ್ರತಿ ವರ್ಷದಂತೆ ಈ ವರ್ಷವೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಂದೂ ಮುಸ್ಲಿಂ ಬಾವೈಕತೆಯ ಸಾರೂವ ಮೊಹರಂ ಹಬ್ಬವು ಅತಿ ವಿಜೃಂಭಣೆಯಿಂದ ಜರುಗಿತು.

5 ದಿನಗಳ ಕಾಲ ಗ್ರಾಮದ ಪಂಚಾಯತಿಯಲ್ಲಿ ದೇವರನ್ನು ಕೂರಿಸಿ ಪ್ರತಿ ದಿನ ಹೆಜ್ಜೆ ಕುಣಿತಗಳು ಹಾಗೂ ಈ ಬಾರಿ ವಿಶೇಷವಾಗಿ ಶೆಗುಣಸಿ ಗ್ರಾಮದ ಹೆಣ್ಣು ಮಕ್ಕಳ ಹೆಜ್ಜೆ ಕುಣಿತ ಹಾಗೂ ಮುತ್ತೂರ ಗ್ರಾಮದ ಯುವಕರ ಹೆಜ್ಜೆ ಕುಣಿತ ಗ್ರಾಮಸ್ಥರ ಗಮನ ಸೆಳೆದಿತ್ತು ಕೊನೆಯ ದಿವಸ ಗ್ರಾಮದಲ್ಲಿ ಗ್ರಾಮಸ್ಥರು ಬೆತ್ತಸು ಹಾರಿಸಿ ದೇವರ ಆಶೀರ್ವಾದ ಪಡೆದುಕೊಂಡು ನಂತರ ಸಂಪ್ರದಾಯ ಪ್ರಕಾರ ದೇವರು ನದಿಗೆ ಹೋಗುವುದು ನದಿಯ ದಂಡೆಯಲ್ಲಿ ಮುಸ್ಲಿಂ ಸಮಾಜದವರು ತಂದ ಚೊಂಗೆ ನೈವೈದ್ಯ ಅರ್ಪಿಸಿ ನದಿ ತಟದಲ್ಲಿ ಇದ್ದ ಗ್ರಾಮಸ್ಥರಿಗೆ ಪ್ರಸಾದವನ್ನು ಹಂಚಿ ಮೊಹರಂ ಹಬ್ಬವನ್ನು ಮುಕ್ತಾಯ ಮಾಡಿದರು
ವರದಿ :ಬಂದೇನವಾಜ ನದಾಫ್




