ಬಾದಾಮಿ : ದಕ್ಷಿಣ ಕಾಶಿ ಸುಕ್ಷೇತ್ರ ಶ್ರೀ ಮಹಾಕೂಟೇಶ್ವರನ ಜಾತ್ರೆಯ ಮಹಾ ರಥೋತ್ಸವ ಮಳೆ ರಾಯನ ಜೊತೆಗೆ ಅದ್ದೂರಿ ಯಶಸ್ವಿ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ದಕ್ಷಿಣ ಕಾಶಿ ಎಂದು ಪ್ರಖ್ಯಾತವಾದ ಶ್ರೀ ಸುಕ್ಷೇತ್ರ ಶ್ರೀ ಮಹಾಕೂಟೇಶ್ವರ ಜಾತ್ರೆ.
ಮಹಾಕೂಟ ಮಾಗುಂಡಪ್ಪ ಎಂದು ಹೆಸರು ಪಡೆದ ಐತಿಹಾಸಿಕ ಸ್ಥಳ ಸುಕ್ಷೇತ್ರ ಮಹಾಕೂಟ.
ಜಾತ್ರೆಯ ರಥೋತ್ಸವದ ಕಳಸದ ಮೆರವಣಿಗೆ ಡೊಳ್ಳು ವಾಧ್ಯ ಮಜಲು ಗಳ ಮೂಲಕ ಗ್ರಾಮದಲ್ಲಿ ಪೂಜೆ ಪುನಸ್ಕಾರ ಭಕ್ತರು ತಮ್ಮ ಸೇವಾ ನೀಡುತ್ತಾ ಮೆರವಣಿಗೆ, ಗ್ರಾಮದ ಭಕ್ತರ ಹಿರಿಯರ ಹಾಗೂ ಆರತಿ ಹಿಡಿದ ಮಹಿಳೆಯರು, ಯುವಕರು ಗ್ರಾಮದ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ನಂತರ ಸಾಯಂಕಾಲದ ರಥೋತ್ಸವ,ಅಪಾರ ಭಕ್ತರ ಸಮ್ಮುಖದಲ್ಲಿ ಮಳೆರಾಯನ ಆರ್ಭಟದೊಂದಿಗೆ ಇತ್ತ ಮಳೆ ಬರುತ್ತಿದ್ದರೆ ಇತ್ತ ಮಹಾಕೂಟೇಶ್ವರ ರಥ ಚಾಲನೆ ಯಾಗಿದೆ.
ಪ್ರತಿಯೊಬ್ಬ ಭಕ್ತರ ಮುಖದಲ್ಲಿ ಸಂತಸ ಮೂಡಿ ಬಂದ ಸಂದರ್ಭ ಇದಾಗಿದೆ.
ಮಹಾಕೂಟೇಶ್ವರ ಮಳೆ ತಂದ ಅನ್ನುವ ಮಾತು ಪ್ರತಿಯೊಬ್ಬ ಭಕ್ತರ ಅನಿಸಿಕೆಯ ಮಾತಾಗಿ ಕೇಳಿ ಬರುತ್ತಿವೆ.
ವರದಿ : ಎಸ್. ಎಸ್. ಕವಲಾಪುರಿ