ಕಂದಗಲ್ಲ :ಕಂಸಾಳೆ, ಗೀಗಿ, ಕೋಲಾಟ, ಬೀಸೋ, ಸುಗ್ಗಿ ಪದಗಳು ಸೇರಿದಂತೆ ವಿವಿಧ ಬಗೆಯ ಅನೇಕ ಜನಪದ ಗೀತೆಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಅದರದೇ ಆದ ಪರಂಪರೆ ಮತ್ತು ಸಂಸ್ಕೃತಿ ಯೊಂದಿಗೆ ಸಂಘಟಿತರಾಗಿ ಬದುಕುತ್ತಿರುವ ಜನ ಸಮುದಾಯವೇ ಜನಪದ ಎಂದು ಸಮೀಪದ ಕುಷ್ಟಗಿ ಬಿ ಆರ್ ಸಿ ಬಿನ್ನಾಳ ಗ್ರಾಮದ ಜನಪದ ಹಾಸ್ಯ ಭಾಷಣಕಾರ ಡಾ ಜೀವನಸಾಬ ವಾಲಿಕಾರ ಅನುಭಾವದ ಮಾತುಗಳನ್ನಾಡಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಂದಗಲ್ಲ ಸುವರ್ಣಗಿರಿ ರುದ್ರುಸ್ವಾಮಿ ಮಠದ ಡಾ ಮ ನಿ ಪ್ರ ಚನ್ನಮಲ್ಲ ಮಹಾಹಾಸ್ವಾಮಿಗಳು ಜನಪದ ಸಾಹಿತ್ಯ ನಮ್ಮ ಜೀವನಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು ಕಳೆದು ಹೋದ ಕಾಲ ಸದ್ಯದ ಕಾಲ ಮುಂದಿನ ಕಾಲದ ಬಗ್ಗೆ ಜನಪದ ಸಾಹಿತ್ಯ ದಿಂದ ನಾವು ಸಾಕಷ್ಟು ತಿಳಿದುಕೊಳ್ಳಬಹುದು. ಗತಕಾಲದ ವೈಭವ ಮರುಕಳಿಸುವಲ್ಲಿ ಜನಪದ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶೀರ್ವಚನ ನೀಡಿದರು.
ತಾ ಪ ಮಾಜಿ ಅಧ್ಯಕ್ಷರಾದ ಮಹಾಂತೇಶ ಕಡಿವಾಲ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ಸೇವೆ ಕಲ್ಪಿಸಿದರು.
ರಾಧಿಕಾ ಪೂಜಾರಿ ಪ್ರಾರ್ಥಿಸಿದರು. ವಿಜಯಾ ಹಡಪದ ವಂದಿಸಿದರು. ಸವಿತಾ ಮಲ್ಲಾಪುರ ನಿರೂಪಿಸಿದರು ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಕಂದಗಲ್ಲ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರು ಮಕ್ಕಳು ಭಾಗವಹಿಸಿದ್ದರು