ಮುದಗಲ್: ನಾಟಕಗಳು ಮನುಷ್ಯನಿಗೆ ನೈತಿಕ ಮೌಲ್ಯಗಳ ಪಾಠ ಹೇಳಿ ಕೊಡುತ್ತಿವೆ. ಇದರಿಂದ ಜನರಲ್ಲಿ ನೈತಿಕ ಮೌಲ್ಯಗಳು ವೃದ್ಧಿಯಾಗುತ್ತಿದೆ’ ಎಂದು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಹೇಳಿದರು.
ಪಟ್ಟಣದಲ್ಲಿ ರಾಯಚೂರು ಜಿಲ್ಲೆಯ ಆಶಾಪುರ ಸಂಗಮೇಶ್ವರ ನಾಟ್ಯ ಸಂಘದಿಂದ ಹಿಂಗಾದರ ಹ್ಯಾಂಗ ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.
ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ ಮೌಡ್ಯವನ್ನು ಎತ್ತಿ ತೊರಿಸುತ್ತಿವೆ. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು,ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಅಂಕಲಗಿಮಠ ಮಠದ ಬಸವರಾಜ ಸ್ವಾಮೀಜಿ ನಾಟಕ ಉದ್ಘಾಟನೆ ಮಾಡಿದರು.
ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸದಸ್ಯ ಮಹೆಬೂಬ್ ಕಡ್ಡಿಪುಡಿ, ತಮ್ಮಣ್ಣ ಗುತ್ತೇದಾರ, ಹಾಜಿಮಲಾಂಗ ಬಾಬಾ, ಪೇಮಾ ಬಸವರಾಜ ಪಾಟೀಲ, ಮಂಜು ಗುಳೇದ ಗುಡ್ಡ , ಪರಶುರಾಮ ಇದ್ದರು.
ವರದಿ:- ಮಂಜುನಾಥ ಕುಂಬಾರ