Ad imageAd image

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮುಬಾರಕ ಗೆ ಸನ್ಮಾನ.

Bharath Vaibhav
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮುಬಾರಕ ಗೆ ಸನ್ಮಾನ.
WhatsApp Group Join Now
Telegram Group Join Now

ಇಲಕಲ್ :ಗುಡೂರ ಎಸ್ ಸಿ – ಇಳಕಲ್ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗುಡೂರ ಗ್ರಾಮದ ವಿದ್ಯಾರ್ಥಿ ಮುಬಾರಕ ಇಮಾಮಸಾಬ ಬೆಳಗಲ್ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 557- ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಕ್ಕಾಗಿ ಗ್ರಾಮದ ಓಣಿಯ ಹಿರಿಯರು ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಧರ ಮ್ಯಾಗೇರಿ ಹಾಗೂ ಹಿರಿಯರಾದ ಮೆಹೆಬೂಬಸಾಬ ಆರಿ ಬಷೀರ್ ಅಹ್ಮದ ಕರ್ನೂಲ್ ಶಿವಾಜಿ ಪವಾರ ರಾಜೇಸಾಬ ಬಾಗವಾನ ಹಸನಸಾಬ ಬಸರಕೋಡ ಬಾಬು ಭಜಂತ್ರಿ ಅಮೀರ್ ಆರಿ,ಮುರ್ತುಜಾಸಾಬ ಬೆಳಗಲ್ ಮನ್ಸೂರ್ ಅಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುಖ್ಯಸ್ಥ ಕೆ ಎಚ್ ಸೋಲಾಪೂರ ಇವರೆಲ್ಲ ಸೇರಿ ಮುಬಾರಕ್ ಬೆಳಗಲ್ ಗೆ ಗೌರವಿಸಿ ಸನ್ಮಾನಿಸಿದರು.

ತಂದೆ ತಾಯಿಗಳ ಬಡತನದ ಪರಿಸ್ಥಿತಿಯಲ್ಲೂ ತಂದೆ ತಾಯಿಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸಿ ಕಲಿಸಿದ ಗುರುಗಳಿಗೂ ತಂದೆ ತಾಯಿಯವರಿಗೂ ಗ್ರಾಮಕ್ಕೆ ಗೌರವ ತಂದು ಕೊಟ್ಟಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಧರ ಮ್ಯಾಗೇರಿ ಮಾತನಾಡಿ ಗ್ರಾಮಕ್ಕೆ ಕೀರ್ತಿ ತಂದಂತವರಿಗೆ ಪಂಚಾಯತ್ ವತಿಯಿಂದ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಉನ್ನತ ವಿದ್ಯಾಭ್ಯಾಸವನ್ನು ಮಾಡಲು ಸಹಾಯ ಸಹಕಾರ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.ಡಾ ಬಷೀರ್ ಅಹ್ಮದ ಕರ್ನೂಲ್ ಮಾತನಾಡಿ ಯಾರೊಂದಿಗೂ ಮಾತನಾಡದೆ ತನ್ನ ವಿದ್ಯಾಭ್ಯಾಸದಲ್ಲಿ ನಿರತನಾಗಿ ಉತ್ತಮ ಸಾಧನೆ ಮಾಡಿದ್ದಾನೆ ಎಂದು ಮುಂದಿನ ವಿದ್ಯಾಭ್ಯಾಸ ಇನ್ನೂ ಚೆನ್ನಾಗಿ ನಡೆಸಲೆಂದು ಶುಭ ಹಾರೈಸಿದರು.ಫರಜಾನ ಸೋಲಾಪೂರ ಸ್ವಾಗತಿಸಿ ವಂದಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!