————————————————ವಾರದಲ್ಲಿ ಎರಡು ದಿನ ಸಾವಿರ ಜನರಿಗೆ ಅನ್ನದಾನ: ವಿ. ಆನಂದ್”
ಬೆಂಗಳೂರು : ಭಾರತೀಯ ಸಂಸ್ಕೃತಿ ಪರಂಪರೆ ಕೊಯ್ದುಕೊಂಡು ಹೋಗುವ ಜವಾಬ್ದಾರಿ ನಮ್ಮ ಹಿಂದೂ ಜನಾಂಗಕ್ಕೆ ಇದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಹೇಳಿದರು.

ಅವರು ಆರ್ ಎಂ ಸಿ ಯಾರ್ಡ್ ವೀರಾಂಜನೇಯ ಸ್ವಾಮಿ ದೇವಸ್ಥಾನ ೧೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು ಕಳೆದ ತಿಂಗಳಲ್ಲಿ ನಮ್ಮ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಭಾಯಿ ತೊಗಾಡಿಯಾ ಅವರು ದೇವಸ್ಥಾನಕ್ಕೆ ಭೇಟಿ ದೇವಸ್ಥಾನದ ಬಗ್ಗೆ ಅವಲೋಕನ ಮಾಡಿ ದೇವಸ್ಥಾನ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅಂದೆ ಈ ದೇವಸ್ಥಾನದ ಹನುಮಾನ್ ಚಾಲಿಸ್ ಕೇಂದ್ರ ಸ್ಥಾಪಿಸಿ ನೂರಾರು ಜನರಿಗೆ ಹನುಮಾನ್ ಚಾಲಿಸ್ ಪಠಣ ಮಾಡಲಿಕ್ಕೆ ಅನುಕೂಲ ಮಾಡಿ ದೇಶದಲ್ಲಿ 1 ಲಕ್ಷ ಕ್ಕೂ ಹೆಚ್ಚು ಹನುಮಾನ್ ಚಾಲಿಸ್ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಇದೆ ಅದರಂತೆ ಕರ್ನಾಟಕ ರಾಜ್ಯದಲ್ಲಿಯು ವಿವಿಧ ಜಿಲ್ಲೆ, ತಾಲುಕು, ಗ್ರಾಮ ಹೀಗೆ ಅನೇಕ ಕಡೆ ಸ್ಥಾಪನೆ ಮಾಡುತ್ತಿದ್ದೇವೆ ಅದಲ್ಲದೆ ಈ ವೀರಾಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ದಾನಿಗಳು ಮುಂದೆ ಬಂದು ತನು ಮನ ಧನ ಸಹಾಯ ಮಾಡಿರಿ ಎಂದು ವಿ. ಆನಂದ್ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೀರಾಂಜನೇಯ ಸ್ವಾಮಿ ದೇವಸ್ಥಾನ ಪ್ರದಾನ ಅರ್ಚಕರಾದ ಪೂಜ್ಯ ಚಂದ್ರಶೇಖರ್ ಸ್ವಾಮಿ ಮಾತನಾಡಿದರು.
ದೇವಸ್ಥಾನ ಅಭಿವೃದ್ಧಿಗೆ ಸಹಾಯ ಅರ್ಪಿಸುವರು ದೇವಸ್ಥಾನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಜರಂಗದಳದ ಅಧ್ಯಕ್ಷರು ಸೆಲ್ವರಾಜ್:9916727771 ಇವರಿಗೆ ಪೊನ್ ಪೆ ಮಾಡಿ ಸಹಕರಿಸಿರಿ ಎಂದು ಪ್ರಾರ್ಥಿಸುತ್ತೇನೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮುನಿರಾಜು, ಆರ್ ಎಸ್ ಎಸ್ ಮುಖಂಡ ಕಾಂತರಾಜು, ಮಹೇಶ್, ನಾಗೆಶ್ವರಿ,
ಶ್ರೀಕಾಂತ್, ಕೆಂಪರಾಜು ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




