ಬಾಗಲಕೋಟೆ: ಹೊಸ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಸಿ ರಾಜು ಹಾಗೂ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ನವೀನ್ ಕಪಾಲಿಯವರ ಸಂಘಟನೆಯ ಹಾಗೂ ಅವರ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಹಾಗೂ ಜಿಲ್ಲಾಧ್ಯಕ್ಷ ಜಗದೀಶ್ ಕರ್ಪೂರ ಮಠ ಅವರ ಹೋರಾಟವನ್ನು ಗುರುತಿಸಿ ನಿನ್ನೆಯ ದಿನ 50ಕ್ಕೂ ಹೆಚ್ಚು ಯುವಕರು ಸೇರ್ಪಡೆಯಾದರು ಈ ಸಂದರ್ಭದಲ್ಲಿ ಬಾಗಲಕೋಟೆಯ ಜಿಲ್ಲಾಧ್ಯಕ್ಷರಾದ ಜಗದೀಶ್ ಕರ್ಪುರ ಮಠ ಅವರು ಕನ್ನಡ ನಾಡು ನುಡಿ ನೆಲದ ಹೋರಾಟದ ಬಗ್ಗೆ ಕೆಲವು ಮಾತನಾಡಿದರು.

ಸಂಘಟನೆಯ ರಾಜ್ಯಾಧ್ಯಕ್ಷರಾದ ಎಸಿ ರಾಜು ಅವರು ಅಧಿಕೃತವಾಗಿ ಸಂಘಟನೆಯ ಕಾರ್ಯಕರ್ತರಿಗೆ ಆದೇಶ ಪತ್ರವನ್ನು ನೀಡಿ ಸ್ವಾಗತಿಸಿದರು ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ತುಳಸಪ್ಪ ಪಾತ್ರೋಟಿ ಹಾಗೂ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವಕ್ಕ ವಡ್ಡರ್ ಹಾಗೂ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಪಾಂಡುರಂಗ ಹುಲಗೇರಿ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ಶಂಕ್ರಪ್ಪ ಬಂಡಿವಡ್ಡರ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಮಾತನಾಡಿ ನಾಡು ನುಡಿ ಜಲ ಭಾಷೆ ವಿಚಾರವಾಗಿ ಎಲ್ಲರೂ ಗಟ್ಟಿ ಧ್ವನಿಯಾಗಿ ಎಲ್ಲರೂ ಮುನ್ನಡಿಯೋಣ ತಾಯಿ ಭುವನೇಶ್ವರಿಯ ಸೇವೆ ಮಾಡಲು ಸದಾ ಸಿದ್ದರಾಗಿ ಕನ್ನಡದ ಕಂಕನನ್ನು ಕಟ್ಟೋಣ ಅಂತ ಹೇಳಿ ಎರಡು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ರಾಘವೇಂದ್ರ ರಾಠೋಡ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಆಸಿಫ್ ಭಗವಾನ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯಾದ ಸಂಜೀವ್ ಕೊಲ್ಕಾರ ರಾಜ್ಯ ಮಹಿಳಾ ಅಧ್ಯಕ್ಷರಾದ ಚೈತ್ರ ಎಲ್ ಹಾಗೂ ಜಿಲ್ಲಾಧ್ಯಕ್ಷರಾದ ಅನ್ನಪೂರ್ಣ ನಂದಿಕೋಲ್ ಶೈಲಜಾ ಹಾಗೂ ಕರಿಯಪ್ಪ ಪೂಜಾರಿ ಯಶವಂತ ವಡ್ಡರ ಸುರೇಶ್ ಮಾದರ್ ಹಾಗೂ ಪುಂಡಲಿ ಚಲವಾದಿ ಇನ್ನು ಅನೇಕ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.




