Ad imageAd image

ಮುಖ್ಯ ರಸ್ತೆಯಲ್ಲಿ ರೈತರು ಹಾಕುತ್ತಿರುವ ಬೆಳೆಯಿಂದ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿವೆ.

Bharath Vaibhav
ಮುಖ್ಯ ರಸ್ತೆಯಲ್ಲಿ ರೈತರು ಹಾಕುತ್ತಿರುವ ಬೆಳೆಯಿಂದ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿವೆ.
WhatsApp Group Join Now
Telegram Group Join Now

ಬಾದಾಮಿ:-ರೈತ ದೇಶದ ಬೆನ್ನೆಲುಬು ಅನ್ನುವದು ನಿಜ ಆದರೆ ಅದೇ ರೈತರಿಂದ ಜೀವಗಳು ಹೋಗುತ್ತಿವೆ ಇದು ಸರಿನಾ ಎನ್ನುವ ಎಕ್ಷ ಪ್ರಶ್ನೆ ಕಾಡುತ್ತಿದೆ.ನೀಲಪ್ಪ ಷಣ್ಮುಖಪ್ಪ ಹೊಸೂರು ಬಾಗಲಕೋಟೆ ಜಿಲ್ಲಾ ಹುನಗುಂದ ತಾಲೂಕು ಚಿಕನಾಳ ಗ್ರಾಮದ ಯುವಕ ಸಾವನ್ನಪ್ಪಿಸಿದ್ದಾನೆ.

ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ನಂದಿಕೇಶ್ವರ ಮತ್ತು ಬಿ ಎಂ ಜಾಲಿಹಾಳ ಗ್ರಾಮದ ಮಧ್ಯದಲ್ಲಿ ನಡೆದ ಘಟನೆ.ಬೆಂಗಳೂರ mnc ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.ಕಳೆದ 5 ತಿಂಗಳ ಹಿಂದೆ ಎಂಗೇಜಮೆಂಟ್ ಆಗಿದ್ದು ದಾಂಪತ್ಯ ಜೀವನಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕಾಲಡಿದಬೇಕಾದ ವ್ಯಕ್ತಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಎಂತಹ ದುರ್ದೈವ ಮದುವೆ ಆಗಬೇಕಾದ ಹೆಂಡತಿ ಭೇಟಿ ನೀಡಿ ಬಾದಾಮಿ ಪಟ್ಟಣಕ್ಕೆ ಕರೆದುಕೊಂಡು ಚಾ ಪಾನಿ ಕುಡಿದು ಸಮಯ ಕಳೆದು ಹೆಂಡತಿ ಆಗಬೇಕಾದ ಮಹಿಳೆ ಅವರ ಗ್ರಾಮಕ್ಕೆ ಬಿಟ್ಟು ಯುವಕ ತಮ್ಮ ಊರಿಗೆ ಹೋಗುವಾಗ ಪ್ರಾಣ ಕಳೆದುಕೊಂಡಿದ್ದಾನೆ.

ಬಾದಾಮಿ ಮತಕ್ಷೇತ್ರದ ಶಾಸಕರು,ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಸ್ಟೋರಿ ಗಮನಿಸಬೇಕು.ಕಳೆದ ಎಷ್ಟೋ ಘಟನೆಗಳು ನಡೆದು ಅನೇಕ ಜೀವ ಕಳೆದುಕೊಂಡ ಘಟನೆ ಸರ್ವೇ ಸಾಮಾನ್ಯ ಆಗಿದೆ.ಮುಖ್ಯ ರಸ್ತೆಯಲ್ಲಿ ರೈತರು ತಾವು ಬೆಳೆದ ಬೆಳೆಯ ರಾಶಿಯನ್ನು ಕೂಡಾ ಮುಖ್ಯ ರಸ್ತೆಯಲ್ಲಿ ಮಾಡುತ್ತಾರೆ.ಯಂತ್ರಗಳಿಂದ ಬೆಳೆಯ ರಾಶಿ ಮಾಡುವಾಗ ಕೂಡಾ ಸಂಚಾರ ಮಾಡಲು ಅನಾನುಕೂಲ ಆಗುತ್ತಿದೆ.ಸಂಚಾರ ಮಾಡುವಾಗ ಸವಾರರಿಗೆ ಕಣ್ಣಿಗೆ ಬಹಳ ತೊಂದರೆ ಆಗುತ್ತಿದೆ.

ಈ ರೀತಿ ಕೆಂದೂರ್ ಗ್ರಾಮದಿಂದ ಮುಂದೆ ಐತಿಹಾಸಿಕ ಸ್ಥಳ ಕಾಟಾಪುರ,ಪಟ್ಟದಕಲ್,ಪ್ರವಾಸಿ ಸ್ಥಾನ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೂ ಕೂಡಾ ಸಂಚಾರ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.ಹಾಗಾದರೆ ಈಗಲಾದರೂ ವರದಿ ಗಮನಿಸಿ ಈ ರೀತಿ ನಡೀತಾ ಬಂದಿರುವ ಸಮಸ್ಯೆಗೆ ಪರಿಹಾರ ಸಿಗುತ್ತಾ ಇಲ್ವಾ ಎಂದು ಕಾದು ನೋಡಬೇಕಾಗಿದೆ.

ವರದಿ:-ಎಸ್. ಎಸ್. ಕವಲಾಪುರಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!