ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ ಸಂಭವಿಸಿದೆ. ಕಾಲೇಜ್ ಬಸ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ವಿವೇಕ ನಗರ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ ಸಂಭವಿಸಿದೆ. ರಸ್ತೆ ಅಪಘಾತಕ್ಕೆ ತಾಯಿ, ಮಗ ಬಲಿಯಾಗಿದ್ದಾರೆ.ಕಾಲೇಜು ಬಸ್ ಡಿಕ್ಕಿಯಾಗಿ ಘಟನೆ ನಡೆದಿದೆ.
37 ವರ್ಷದ ತಾಯಿ ಸಂಗೀತಾ, 8 ವರ್ಷದ ಬಾಲಕ ಪಾರ್ಥ ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಡೆದುಕೊಂಡು ಶಾಲೆಗೆ ಮಗನನ್ನು ತಾಯಿ ಕರೆದೊಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ.
ಅಪಘಾತದ ಬಳಿಕ ಕಾಲೇಜು ಬಸ್ ಚಾಲಕ ಪರಾರಿಯಾಗಿದ್ದಾನೆ. ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




