Ad imageAd image

ಅಡುಗೆ ಮಾಡುವ ವಿಚಾರಕ್ಕೆ ಅತ್ತೆ – ಸೂಸೆ ನಡುವೆ ಜಗಳ : ಸೂಸೆ ಆತ್ಮಹತ್ಯೆ 

Bharath Vaibhav
ಅಡುಗೆ ಮಾಡುವ ವಿಚಾರಕ್ಕೆ ಅತ್ತೆ – ಸೂಸೆ ನಡುವೆ ಜಗಳ : ಸೂಸೆ ಆತ್ಮಹತ್ಯೆ 
WhatsApp Group Join Now
Telegram Group Join Now

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 35 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ವಾರದ ಅವಧಿಯಲ್ಲಿ ನಗರದಲ್ಲಿ ನಡೆದ ಎರಡನೇ ಟೆಕ್ಕಿ ಆತ್ಮಹತ್ಯೆ ಇದಾಗಿದೆ. ವರದಕ್ಷಿಣೆ ಕಿರುಕುಳದ ಆರೋಪಗಳು ಕೇಳಿಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮೃತರನ್ನು ಸುಷ್ಮಾ (35 ವರ್ಷ) ಎಂದು ಗುರುತಿಸಲಾದೆ. ಅವರು ಈ ಹಿಂದೆ ಅಮೆರಿಕದ ಪ್ರಮುಖ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಪುನೀತ್ ಕುಮಾರ್ ಎಂಬುವವರೊಂದಿಗೆ 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಮಗನಿದ್ದಾನೆ.

ಮಂಗಳವಾರ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ಅವರ ನಡುವೆ ಅಡುಗೆ ಮಾಡುವ ವಿಚಾರವಾಗಿ ಕ್ಷುಲ್ಲಕ ಜಗಳ ನಡೆದಿದೆ ಎಂದು ವರದಿಯಾಗಿದೆ. ಅತ್ತೆಯು ಸುಷ್ಮಾಗೆ ಅಡುಗೆ ಮಾಡಲು ಬಿಡುತ್ತಿರಲಿಲ್ಲ ಮತ್ತು ಇತರ ವಿಷಯಗಳ ಬಗ್ಗೆಯೂ ಕಿರುಕುಳ ನೀಡುತ್ತಿದ್ದರು ಎಂದು ಸುಷ್ಮಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸ್ ಕ್ರಮ : ಸುಷ್ಮಾ ಅವರ ಪೋಷಕರ ದೂರಿನ ಮೇರೆಗೆ ಸೊಲದೇವನಹಳ್ಳಿ ಪೊಲೀಸರು ಪತಿ ಪುನೀತ್ ಕುಮಾರ್‌ನನ್ನು ವರದಕ್ಷಿಣೆ ಕಿರುಕುಳದ ಆರೋಪದಡಿ ಬಂಧಿಸಿದ್ದಾರೆ. ಅತ್ತೆ ಕಲ್ಪನಾ ಅವರಿಗಾಗಿ ಶೋಧ ನಡೆಯುತ್ತಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!