ವಿಜಯಪುರ :ನಿಡುಗುಂದಿ ತಾಲೂಕಿನ ಬೆನಾಳ್ ಹೋಗುವ ಮಾರ್ಗವಾಗಿ ಎಡದಂಡೆ ಕಾಲುವೆಯಲ್ಲಿ ಮಹಿಳೆ ಒಬ್ಬಳು ಮಕ್ಕಳೊಂದಿಗೆ ಹಾರಿದ ಘಟನೆ ನಡೆದಿದೆ.
ತೆಲಗಿ ಗ್ರಾಮದ ಭಾಗ್ಯಶ್ರೀ ನಿಂಗಪ್ಪ ಭಜಂತ್ರಿ 26 ವರ್ಷದ ಮಹಿಳೆ, ತನ್ನ ನಾಲ್ಕು ಮಕ್ಕಳೊಂದಿಗೆ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ, ಅಲ್ಲೇ ಇದ್ದ ಮೀನುಗಾರರು ಸಾರ್ವಜನಿಕರು ಅವಳನ್ನು ಕಂಡು ಆ ತಾಯಿಯನ್ನು ಬದುಕಿಸಿದ್ದಾರೆ.ಆದರೆ ನಾಲ್ಕು ಮಕ್ಕಳು ನೀರು ಪಾಲಾಗಿದ್ದು ಎರಡು ಮಕ್ಕಳ ಮೃತ ದೇಹ, ಹೊರ ತೆಗೆಯಲಾಗಿದೆ, ಇನ್ನು ಇಬ್ಬರ ಮಕ್ಕಳನ್ನು ಹುಡುಕಾಡುತ್ತಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯ ಆತ್ಮಹತ್ಯೆ ಪ್ರಯತ್ನಿಸಿದ್ದು, ಮಹಿಳೆ ಬದುಕುಳಿದು ನಾಲ್ಕು ಮಕ್ಕಳು ಸಾವನ್ನಪ್ಪಿರುವುದು ದುರಂತ. ಎರಡು ಹೆಣ್ಣು ಮಕ್ಕಳಾದ ತನುಶ್ರೀ 5 ವರ್ಷ, ಸುರಕ್ಷಾ 3 ವರ್ಷ, ಸಾವನ್ನಪ್ಪಿದ್ದಾರೆ.
13 ತಿಂಗಳ ಅವಳಿ ಜವಳಿ ಗಂಡು ಮಕ್ಕಳು ನಿರುಪಾಲಾಗಿದ್ದು ಬದುಕುಳಿದಿರುವ ಸಾಧ್ಯತೆ ಇಲ್ಲ. ಎರಡು ಗಂಡು ಮಕ್ಕಳ ಹೆಸರು ಹಸನ್ ಹುಸೇನ್ 13 ತಿಂಗಳ ಮಕ್ಕಳನ್ನು ಹುಡುಕಾಟ ನಡೆಯುತ್ತಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ನಿಡಗುಂದಿ ಠಾಣೆಯ CPI ಅಶೋಕ್ ಚವಾನ್, ಪಿಎಸ್ಐ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಸೇರಿ ಹುಡುಕುವ ಕಾರ್ಯಾಚರಣೆ ಮುಂದಾಗಿದ್ದಾರೆ…..
ಗಂಡ ನಿಂಗರಾಜ್ ಭಜಂತ್ರಿ ನಾಲ್ಕು ಮಕ್ಕಳನ್ನು ತೆಗೆದುಕೊಂಡು ಕಂಗಾಲಾಗಿದ್ದಾನೆ, ಈ ಘಟನೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಮೊಮ್ಮಕ್ಕಳನ್ನು ಕಳೆದುಕೊಂಡ ಅಜ್ಜ ಅಜ್ಜಿ ಸಂಬಂಧಿಕರ ನೋವು ಮುಗಿಲು ಮುಟ್ಟಿತು.
ವರದಿ :ಅಲಿ ಮಕಾನದಾರ