ಬೆಳಗಾವಿ : ಕೇವಲ 500 ರೂಪಾಯಿ ವಿಚಾರಕ್ಕೆ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.
ತಾಯಿಯ ಸಮ್ಮುಖದಲ್ಲಿ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿದೆ. ಹುಸೇನ್ (45) ಮೃತ ದುರ್ದೈವಿ. ಸ್ನೇಹಿತರಾದ ಮಿಥುನ್ ಕುಬಜಿ ಮತ್ತು ಮನೋಜ್ ಎನ್ನುವವರಿಂದ ಕೃತ್ಯ ನಡೆದಿದೆ.
ಗುಜರಿ ಸಾಮಗ್ರಿ ವಿಚಾರವಾಗಿ ಸ್ನೇಹಿತರ ಮಧ್ಯ ಗಲಾಟೆ ಆಗಿತ್ತು. ಮೃತ ಹುಸೇನ್ ಆರೋಪಿಗಳಿಗೆ 500 ರೂಪಾಯಿ ನೀಡಬೇಕಿತ್ತು. ಹಣ ಕೇಳಲು ಮನೆಗೆ ಹೋದಾಗ ವಾಗ್ವಾದ ನಡೆದು ಗಲಾಟೆಯಾಗಿದೆ.
ಈ ವೇಳೆ ಕೈಯಿಂದ ಹೊಡೆದು ಕಾಲಿನಂದ ಒದ್ದು ಮರಣಾನಾಂತಿಕ ಹಲ್ಲೆ ಮಾಡಿದ್ದಾರೆ. ಹೊಟ್ಟೆ ಭಾಗದಲ್ಲಿ ಬಲವಾಗಿ ಪೇಟ್ಟಾಗಿದ್ದರಿಂದ ಹುಸೇನ್ ಸಾವನೊಪ್ಪಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.




