Ad imageAd image

ಮದುವೆ ವಿಚಾರಕ್ಕೆ ಬಾವಿಗೆ ಹಾರಿ ಮಗಳು ಆತ್ಮಹತ್ಯೆ: ರಕ್ಷಣೆಗೆ ಹೋದ ತಾಯಿಯೂ ಸಾವು

Bharath Vaibhav
ಮದುವೆ ವಿಚಾರಕ್ಕೆ ಬಾವಿಗೆ ಹಾರಿ ಮಗಳು ಆತ್ಮಹತ್ಯೆ: ರಕ್ಷಣೆಗೆ ಹೋದ ತಾಯಿಯೂ ಸಾವು
WhatsApp Group Join Now
Telegram Group Join Now

ಕಲಬುರಗಿ : ಮದುವೆ ವಿಚಾರಕ್ಕೆ ಗಲಾಟೆಯಾಗಿ ಬಾವಿಗೆ ಹಾರಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ರಕ್ಷಿಸಲು ಹೋದ ತಾಯಿಯೂ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಜಗದೇವಿ(47), ಪುತ್ರಿ ಮಧುಮತಿ(22) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮಧುಮತಿ ಮದುವೆ ವಿಷಯಕ್ಕೆ ಕುಟುಂಬದಲ್ಲಿ ಜಗಳ ನಡೆದಿತ್ತು. ಮದುವೆ ವಿಷಯಕ್ಕೆ ಗಲಾಟೆಯಾಗಿ ಮಧುಮತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಗಳನ್ನು ರಕ್ಷಿಸಲು ಹೋಗಿ ತಾಯಿಯು ಬಾವಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!