ಅಂಗನವಾಡಿ ಮಕ್ಕಳ ಬೆಳವಣಿಗೆಯತ್ತ ತಾಯಂದಿರ ಗಮನ ಅಗತ್ಯ,ಭೋಜದಲ್ಲಿ ಪೋಷಣೆ ಅಭಿಯಾನ ಯೋಜನೆಗೆ ಚಾಲನೆ ನೀಡಿ ಶಾಸಕಿ ಜೊಲ್ಲೆ ಅಭಿಮತ
ನಿಪ್ಪಾಣಿ :ಮಕ್ಕಳಿಗೆ ಪಠ್ಯಪುಸ್ತಕದ ಶಿಕ್ಷಣದ ಜೊತೆಗೆ ಟಿವಿ ಮಾಧ್ಯಮದಿಂದ ಕಲಿಕೆಗೆ ಒತ್ತು ನೀಡುವುದಕ್ಕಾಗಿ ನಿಪ್ಪಾಣಿ ಮತಕ್ಷೇತ್ರದಲ್ಲಿ ಯ 66 ಅಂಗನವಾಡಿ ಶಾಲೆಗಳಲ್ಲಿ ಎಲ್. ಈ.ಡಿ ಅಳವಡಿಸಲು ಮಂಜೂರಿ ಪಡೆಯಲಾಗಿದ್ದು ಇದರ ಮೊದಲ ಹಂತವಾಗಿ 30ಅಂಗನವಾಡಿಗಳಿಗೆ ಟಿ. ವಿ ಹಂಚಲಾಗುತ್ತಿದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಸರಕಾರಿ ಹಿರಿಯ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪೋಷಣೆ ಅಭಿಯಾನ ಮಾಸಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಚಂದನ್ ಮುರಾಬಟ್ಟೆ, ಮಯೂರಿ ಮೋಹಿತೆ, CDPO ಸುಪ್ರಿಯಾ ಜಡಗೆ ಹಾಗೂ ಗಣ್ಯರ ಮುಖ್ಯ ಉಪಸ್ಥಿತಿಯಲ್ಲಿ ರಿಬ್ಬನ್ ಕಟ್ ಮಾಡಿ ಟಿವಿಗೆ ಚಾಲನೆ ನೀಡಿದರು.ಇದಕ್ಕೂ ಮೊದಲು ಅಂಗನವಾಡಿ ಮಕ್ಕಳಿಂದ ಹಾಡು, ಅಕ್ಷರ ಜ್ಞಾನ ಅಳಿಸಿ ಚಾಕ್ಲೆಟ್ ನೀಡಿ ಅಭಿನಂದಿಸಿದರು.

ತದನಂತರ ವೇದಿಕೆಯಲ್ಲಿಯ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತಿಕೆ, ಬಾಣಂತಿಯರಿಗೆ, ಹಾಗೂ ಚಿಕ್ಕಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ತಾಯಂದಿರರಿಗೆ ಅದರ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಸುದರ್ಶನ್ ಮುರಾಬಟ್ಟೆ, ವಿನೋದ ಸಂಕಪಾಳ, ಪ್ರಶಾಂತ್ ಪಾಟೀಲ, ಸಂತೋಷ ಚವಾಣ, ನೀತಿನ ಮಿರಜೆ, ಗ್ರಾಮ ಪಂಚಾಯತಿ ಸದಸ್ಯರು ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು. ಎಸಿಡಿಪಿಓ ಜಯಶ್ರೀ ಕೌಜಲಗಿ ನಿರೂಪಿಸಿ ವಂದಿಸಿದರು.
ವರದಿ:ಮಹಾವೀರ ಚಿಂಚಣೆ




