Ad imageAd image

ಮಾತೃ ಹೃದಯ ವಂತಿಕೆ ಅಧಿಕಾರಿ ಬಸವರಾಜ ಯಾದವಾಡ:ರಾಜೇಂದ್ರ ಐಹೊಳೆ ಅಭಿಪ್ರಾಯ

Bharath Vaibhav
ಮಾತೃ ಹೃದಯ ವಂತಿಕೆ ಅಧಿಕಾರಿ ಬಸವರಾಜ ಯಾದವಾಡ:ರಾಜೇಂದ್ರ ಐಹೊಳೆ ಅಭಿಪ್ರಾಯ
WhatsApp Group Join Now
Telegram Group Join Now

ಆಥಣಿ:ವಸತಿನಿಲಯದ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ಅಂತಹ ಮಾತೃ ಹೃದಯ ವಂತಿಕೆ ಅಧಿಕಾರಿ ಬಸವರಾಜ ಯಾದವಾಡ ಅವರಲ್ಲಿ ನಾನು ಕಂಡೆ ಎಂದು ರಾಜೇಂದ್ರ ಐಹೊಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಅಥಣಿ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಇಲಾಖೆ ಹಮ್ಮಿಕೊಂಡ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರ ವಸತಿಯ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಬಸವರಾಜ್ ಯಾದವಾಡ ಹಾಗೂ ದ್ವಿತೀಯ ದರ್ಜೆಯ ಸಹಾಯಕರಾದ ಮಹಾವೀರ್ ಬಿಲ್ಲನವರ್ ಇವರ ವಯೋನಿವೃತ್ತಿ ನಿಮಿತ್ಯ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಸವರಾಜ್ ಯಾದವಾಡ ಅವರು ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಯಾವತ್ತು ಅವರ ಸೇವಾ ಮನೋಭಾವ ನಮಗೆಲ್ಲರಿಗೂ ಮಾದರಿಯಾಗಿದೆ ಅವರ ನಿವೃತ್ತಿ ಜೀವನ ಇನ್ನಷ್ಟು ಸುಖಕರವಾಗಲಿ ಎಂದರು.

ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ರಾಮನಗೌಡ ಕನ್ನೊಳ್ಳಿ ಮಾತನಾಡಿ ಬಸವರಾಜ ಯಾದವಾಡ ಅವರ ವ್ಯಕ್ತಿತ್ವ, ಸಮಯಪ್ರಜ್ಞೆ, ಶಿಸ್ತುಬದ್ಧ ಜೀವನ ಇತತರಿಗೆ ಮಾದರಿ ಎಂದರು. ಇನ್ನೋರ್ವ ಬೀಳಕೊಡುತ್ತಿರುವ ದ್ವಿತೀಯ ದರ್ಜೆಯ ಸಹಾಯಕರಾದ ಮಹಾವೀರ್ ಬಿಲ್ಲನೂರ್ ಸೇವಾಮನೋಭಾವವನ್ನು ಇತರ ಕಿರಿಯ ನೌಕರರು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸೇವಾ ನಿವೃತ್ತಿ ಹೊಂದುತ್ತಿರುವ ಇವರ ನಿವೃತ್ತಿ ಜೀವನ ಸುಖಮಯವಾಗಲಿ, ಆರೋಗ್ಯಕರವಾಗಲಿ ಎಂದು ಶುಭಹಾರೈಸಿದರು

ಪುರಸಭೆ ಮುಖ್ಯ ಅಧಿಕಾರಿಗಳಾದ ಅಶೋಕ ಗುಡಿಮನಿ ಮಾತನಾಡಿ ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಅವರ ಪ್ರಾಮಾಣಿಕ ಸೇವೆ ಜನರ ಮೆಚ್ಚುಗೆಯ ಪಾತ್ರರಾಗಿದ್ದಾರೆ ಹಿಂತಾ ಅನುಭವಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ನಡೆದುಕೊಳ್ಳಬೇಕಾಗಿದೆ ಎಂದು ಅವರ ಸೇವೆಯನ್ನು ಸ್ಮರಿಸಿದರು.

ಬಸವರಾಜ್ ಯಾದವಾಡ ಅವರು ಮಾತನಾಡಿ ಸುಮಾರು 35 ವರ್ಷಗಳಿಂದ ಈ ಭಾಗದಲ್ಲಿ ಸೇವೆ ಸಲ್ಲಿಸಿದ್ದು ನನ್ನಗೆ ಸಂತೋಷ ಇದೆ ನನ್ನ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕತೆ ಸೇವೆ ಸಲ್ಲಿಸಿದು ನನಗೆ ನಿವೃತ್ತಿ ಜೀವನ ಬೇಸರ ಇಲ್ಲ ಎಂದರು ತಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ತಮ್ಮ ಅನುಭವದ ವಿಚಾರವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಎಸ್ ಎ ಮಾಂಗ ಸಹಾಯಕ ನಿರ್ದೇಶಕರು ಸಾಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ಸ್ಥಾನ ಸ್ವೀಕರಿಸಿದ ಇವರನ್ನು ಎಲ್ಲಾ ಅಧಿಕಾರಿಗಳು ವಿವಿಧ ಸಂಘಟನೆಕಾರರು ಸಮಾಜ ಬಾಂಧವರು ಸೇರಿ ಇವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು ಪ್ರಭಾರಿ ಅಧಿಕಾರಿ ಹುಕ್ಕೇರಿ ವಿನಾಯಕ್ ಕಲ್ಲೇಕನವರ. ಮಹೇಶ್ ಉಣ್ಣಿ ಎಂ.ಬಿ ಹೊಸಮನಿ ಪ್ರವೀಣ್ ಮೇತ್ರಿ. ನೌಕರ ಸಂಘದ ಅಧ್ಯಕ್ಷರಾದ ರಾಮನಗೌಡ ಪಾಟೀಲ. ಉದಯಕುಮಾರ್ ಪಾಟೀಲ್. ಶಶಿ ಸಾಳ್ವೆ. ಹಾಗೂ ಚಂದ್ರಕಾಂತ್ ಕಾಂಬಳೆ ಡಿ .ವಿ ಗುಳಪ್ಪನವರ್ ಗಣೇಶ್ ಪವಾರ್ ರಾಜಶೇಖರ್ ಹಿರೇಮನಿ, ಶ್ರುತಿ ಘಟಕಾಂಬಳೆ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ವಿವಿಧ ಸಂಘಟನೆಗಾರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಒ. ಆಯ್. ಅರಟಾಳ ಸ್ವಾಗತಿಸಿದರು ಲಕ್ಷ್ಮಣ ಜಯಗೋಣಿ ನಿರೂಪಿಸಿದರು. ಸಿ. ಟಿ. ಬಡಕಂಬಿ ವಂದಿಸಿದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!