Ad imageAd image

ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಗೆ ಹಾಗೂ ಮೃತ ಯಲ್ಲಪ್ಪ ಗುಂಡ್ಯಾಗೋಳ ಮನೆಗೆ ಭೇಟಿ ನೀಡಿದ ಸಂಸದರಾದ ಜಗದೀಶ ಶೆಟ್ಟರ

Bharath Vaibhav
ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಗೆ ಹಾಗೂ ಮೃತ ಯಲ್ಲಪ್ಪ ಗುಂಡ್ಯಾಗೋಳ ಮನೆಗೆ ಭೇಟಿ ನೀಡಿದ ಸಂಸದರಾದ  ಜಗದೀಶ ಶೆಟ್ಟರ
WhatsApp Group Join Now
Telegram Group Join Now

ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಶ್ರೀ ಜಗದೀಶ ಶೆಟ್ಟರ , ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ ಹಿತಾಸಕ್ತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ಕಾರ್ಖಾನೆಯ ಬೆಂಕಿ ಅವಘಡದಿಂದಾಗಿ ಮಾರ್ಕಂಡೇಯ ನಗರದ ಯುವಕ ಯಲ್ಲಪ್ಪ ಗುಂಡ್ಯಾಗೋಳ ಮರಣಹೊಂದಿದ ಹಿನ್ನೆಲೆಯಲ್ಲಿ ಮೃತ ಯುವಕನ ಮನೆಗೆ ಭೇಟಿ ನೀಡಿ, ಅವರ ತಂದೆ ತಾಯಿ‌ ಮತ್ತು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು.

ಎಲ್ಲ ಕಾರ್ಖಾನೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ತುಂಬಾ ಮುಖ್ಯ. ಕಾರ್ಮಿಕರ ಪ್ರಾಣಹಾನಿಯಾಗದಂತೆ ಸೂಕ್ತ ಕ್ರಮಗಳನ್ನು ಕಾರ್ಖಾನೆಗಳು ಕಡ್ಡಾಯವಾಗಿ ಅನುಸರಿಸಬೇಕು. ಮಾಲಿಕರು ಕಾರ್ಮಿಕರ ಯೋಗಕ್ಷೇಮದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್, ಮುಖಂಡರಾದ ಶ್ರೀ ಧನಂಜಯ್ ಜಾಧವ್, ಶ್ರೀ ಚೇತನ್ ಅಂಗಡಿ, ಶ್ರೀ ಹೇಮಂತ್ ಪಾಟೀಲ್, ಶ್ರೀ ನಾಗೇಂದ್ರ ದೇಸಾಯಿ, ಶ್ರೀ ಸಂತೋಷ ದೇಸಾಯಿ, ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು

ವರದಿ:- ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!