Ad imageAd image

ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಸೇವೆಗಳನ್ನು ಬೆಳಗಾವಿ (ಕರ್ನಾಟಕ) ವರೆಗೆ :ಸಂಸದರಾದ ಜಗದೀಶ ಶೆಟ್ಟರ ವಿಸ್ತರಿಸಲು ಮನವಿ

Bharath Vaibhav
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಸೇವೆಗಳನ್ನು ಬೆಳಗಾವಿ (ಕರ್ನಾಟಕ) ವರೆಗೆ :ಸಂಸದರಾದ  ಜಗದೀಶ ಶೆಟ್ಟರ  ವಿಸ್ತರಿಸಲು  ಮನವಿ
WhatsApp Group Join Now
Telegram Group Join Now

ಬೆಳಗಾವಿ: ಮಹತ್ವದ ಬೇಡಿಕೆಯಾದ ಬೆಂಗಳೂರು -ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯ ವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ  ಜಗದೀಶ ಶೆಟ್ಟರ ಅವರು.

ಪುಣೆ-ಬೆಳಗಾವಿ-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಾರಂಭಿಸಬೇಕು ಎಂಬ ನಮ್ಮ ಮನವಿಗೆ ಸ್ಪಂದಿಸಿ, ನಮ್ಮ ಬೆಳಗಾವಿ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ನಾಳೆ ಸೆಪ್ಟೆಂಬರ್ 16ರಂದು ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಚಾಲನೆ ದೊರೆಯಲಿರುವುದು ಅತ್ಯಂತ ಸಂತಸದ ಸಂಗತಿ. ಇದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು.

ಇದೀಗ ನಮ್ಮ ಕ್ಷೇತ್ರದ ಜನರ ಮತ್ತೊಂದು ಮಹತ್ವದ ಬೇಡಿಕೆಯಾದ ಬೆಂಗಳೂರು -ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯ ವರೆಗೆ ವಿಸ್ತರಿಸಲು ತಮ್ಮಲ್ಲಿ ವಿನಂಬ್ರ ಮನವಿ. ಈ ಹಿಂದೆ ಈ ರೈಲನ್ನು ಬೆಳಗಾವಿಯ ವರೆಗೆ ಟ್ರಯಲ್ ರನ್ ಮಾಡಿದಾಗ ಅದು ಯಶಸ್ವಿಯಾಗಿತ್ತು. ತಾಂತ್ರಿಕ ಕಾರಣಗಳನ್ನು ನೀಡಿದ ರೈಲ್ವೆ ಅಧಿಕಾರಿಗಳು ಹೊಸ ವೇಳಾಪಟ್ಟಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ನಾನು ಈಗಾಗಲೇ ನಿಮ್ಮೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ತಿಳಿಸಿದ್ದೇನೆ.

ಕ್ಷೇತ್ರದ ಜನರ ಬೆಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಸೇವೆಗಳನ್ನು ಬೆಳಗಾವಿ (ಕರ್ನಾಟಕ) ವರೆಗೆ ವಿಸ್ತರಿಸಲು ತಾವು ಮನವಿಯನ್ನು ಪರಿಶೀಲಿಸುವಂತೆ ನಾನು ಮತ್ತೊಮ್ಮೆ ವಿನಂತಿಸುತ್ತೇನೆ. ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ

 

ವರದಿ ಪ್ರತೀಕ ಚಿಟಗಿ 

WhatsApp Group Join Now
Telegram Group Join Now
Share This Article
error: Content is protected !!