Ad imageAd image

ನನ್ನ ಕರ್ಮಭೂಮಿ, ಎಂದರು ಸಂಸದ ಜಗದೀಶ್ ಶಟ್ಟರ

Bharath Vaibhav
ನನ್ನ ಕರ್ಮಭೂಮಿ, ಎಂದರು  ಸಂಸದ ಜಗದೀಶ್ ಶಟ್ಟರ
WhatsApp Group Join Now
Telegram Group Join Now

ರಾಮದುರ್ಗ:- ಪಟ್ಟಣದ ಶ್ರೀ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ರಾಮದುರ್ಗ ಮಂಡಲದ ನೇತೃತ್ವದಲ್ಲಿ ಸಂಸದ ಜಗದೀಶ ಶೆಟ್ಟರ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್ ಪಾಟೀಲ ಅವರು ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ.

ಈ ಸಂತಸ ಚುನಾವಣೆ ಗೆಲವು ನನ್ನದಲ್ಲ. ನನ್ನ ಗೆಲವು ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ. ರಾಜಕೀಯ ಜನ್ಮ ನೀಡಿದ ಭೂಮಿ ಹುಬ್ಬಳ್ಳಿಯಾದರೆ ಬೆಳಗಾವಿ ನನ್ನ ಕರ್ಮಭೂಮಿಯಾಗಿ ಸ್ವೀಕರಿಸಿದ್ದೇನೆ. ಈ ಭಾಗದ ಕಳಸಾ ಬಂಡೂರಿ ನಾಲೆ ಹಾಗೂ ಮಹಾದಾಯಿ ನದಿ ಜೋಡೆಣೆ ಸೇರಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಭರವಸೆ ನೀಡಿದರು.

ಸಂಸತ ಚುನಾವಣೆಯಲ್ಲಿ ಹಣಬಲ, ಅಧಿಕಾರದ ಬಲ ನಡೆಯುವುದಿಲ್ಲ ಎಂದು ಜಿಲ್ಲೆಯ ಕಾರ್ಯಕರ್ತರು ತೋರಿಸಿ ಕೊಟ್ಟಿದ್ದಾರೆ. ಸಚಿವರ ಕ್ಷೇತ್ರದಲ್ಲಿಯೇ ಮಗನಿಗೆ ಸುಮಾರು 50 ಸಾವಿರ ಮತಗಳು ಕಡಿಮೆ ಆಗಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಈ ಬಾರಿ ಮೋದಿಯವರು ದೇಶದಲ್ಲಿ ನಡೆಸಿದ ಆಡಳಿತದಿಂದ ಭಾರತಕ್ಕೆ ಗೌರವ ನೀಡುವ ಜಯ ಬೆಳಗಾವಿ ಕ್ಷೇತ್ರದಿಂದ ನಡೆದಿದೆ. ರಾಮದುರ್ಗ ಭಾಗಕ್ಕೆ ರೇಲ್ವೆ ಯೋಜನೆ, ನೀರಾವರಿ, ಹಾಗೂ ಶಬರಿಕೊಳ್ಳ ಪ್ರವಾಸಿ ತಾಣ ನಿರ್ಮಾಣದ ಸ್ಥಳೀಯ ಬೇಡಿಕೆಗಳನ್ನು ಪೂರೈಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು .

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ರಾಮದುರ್ಗ ಮತಕ್ಷೇತ್ರದ ಮೇಲೆ ಜಿಲ್ಲಾ ಮುಖಂಡರು ಹಾಗೂ ವರಿಷ್ಠರ ಆಶೀರ್ವಾದ ಇರಬೇಕು. ಯಾರು ಇಲ್ಲಿ ಪಕ್ಷ ಸಂಘಟನೆ ಹಾಗೂ ಜನತೆಯ ಸೇವೆ ಮಾಡುತ್ತಾರೆ ಎಂದು ಗಮನದಲ್ಲಿಟ್ಟುಕೊಂಡಿರಬೇಕು ಎಂದು ಮನವಿ ಮಾಡಿದ ಅವರು, ರಾಮದುರ್ಗ ತಾಲೂಕಿನ ಅಭಿವೃದ್ಧಿಗೆ ಜಗದೀಶ ಶೆಟ್ಟರ ವಿಶೇಷ ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಇನ್ನು ಹಲವಾರು ಮುಖಂಡರು ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಕೊಪ್ಪದ, ಮುಖಂಡರಾದ ಪಿ.ಎಫ್. ಪಾಟೀಲ, ಮಾರುತಿ ಕೊಪ್ಪದ, ಎಸ್.ಎಸ್. ಢವಣ, ಇನ್ನು ಅನೇಕ ಮುಖಂಡರು ಕಾರ್ಯಕರ್ತರು ಸೇರಿದರು, ಮತ್ತು ಉಮೇಶ ಹಕಾಟಿ ಸ್ವಾಗತಿಸಿದರು, ರವೀಂದ್ರ ಹರವಿ ಪರಿಚಯಿಸಿದರು, ಶಂಕರ ಹುರಕಡ್ಲಿ ಕಾರ್ಯಕ್ರಮ ನಿರೂಪಿಸಿದರು,

ವರದಿ:-ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!