ಬೆಳಗಾವಿ: ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಗಳು ಹಾಗೂ ನೈರುತ್ಯ ವಲಯ ರೈಲ್ವೆಯ ಅಧಿಕಾರಿಗಳ ಜೊತೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಸಭೆ ನಡೆಸಿ, ವಿಮಾನ ನಿಲ್ದಾಣದ ಅಭಿವೃದ್ಧಿ, ಭೂಸ್ವಾಧೀನ ಪ್ರಕ್ರಿಯೆ, ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಪರಿವರ್ತಿಸಲು ಅವಶ್ಯವಿರುವ ಬಗ್ಗೆ ಪರಿಶೀಲಿಸುವ ವಿಷಯಗಳು, ಬೆಳಗಾವಿ ರಿಂಗ್ ರೋಡ್ / ಬೈಪಾಸ್ ರಸ್ತೆ ಬಗ್ಗೆ, ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲು ನಿರ್ಮಾಣಕ್ಕೆ ಅವಶ್ಯಕವಿರುವ ಭೂಸ್ವಾಧೀನ ವಿಷಯಗಳ ಕುರಿತು ಚರ್ಚಿಸಿ, ಮಾಹಿತಿ ಪಡೆದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ರೋಶನ್ ಮಹಮದ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಶ್ರೀ ತ್ಯಾಗರಾಜ, ಬೈಪಾಸ್ ರಸ್ತೆ ಪ್ರೊಜೆಕ್ಟ್ ನಿರ್ದೇಶಕರಾದ ಶ್ರೀ ಭುವನೇಶಕುಮಾರ, ನೈರುತ್ಯ ವಲಯ ರೈಲ್ವೆ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ