Ad imageAd image

ನಾವಗೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆ

Bharath Vaibhav
ನಾವಗೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆ
WhatsApp Group Join Now
Telegram Group Join Now

ಬೆಳಗಾವಿ :-ತಾಲೂಕಿನ ನಾವಗೆ ಗ್ರಾಮದ ಹತ್ತಿರ ಖಾಸಗಿ ಫ್ಯಾಕ್ಟರಿವೊಂದರಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಒಬ್ಬ ಉದ್ಯೋಗಿ ಮೃತರಾದ ಬಗ್ಗೆ ಹಾಗೂ ಹಲವಾರು ಹಲವಾರು ಉದ್ಯೋಗಿಗಳು ಸಹ ಗಾಯಗೊಂಡಿರುವ ವಿಷಯದ ಕುರಿತು ಬೆಳಗಾವಿ ಲೋಕಸಭಾ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ತಮ್ಮ ಖೇದ ವ್ಯಕ್ತಪಡಿಸಿದ್ದಾರೆ.

ಉದ್ಯಮದಾರರು ಅವರು ನಡೆಸುವ ಉದ್ಯಮದಲ್ಲಿ ಯಾವತ್ತೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕ. ಇಲ್ಲವಾದಲ್ಲಿ ಇಂತಹ ಅವಘಡಗಳು ಸಂಭವಿಸಿ ಉದ್ಯೋಗಿಗಳ ಜೀವಕ್ಕೆ ವಿನಾಕಾರಣ ಅಪಾಯ ತರುವುದು ಸ್ಪಷ್ಟ.

ದೆಹಲಿಯಲ್ಲಿ ಮಳೆಗಾಲ ಸಂಸದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅವಘಡದಲ್ಲಿ ಮೃತರಾದ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ತಿಳಿಸಲು ಹಾಗೂ ಗಾಯಗೊಂಡ ಉದ್ಯೋಗಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲು ಸಾಧ್ಯವಾಗಿಲ್ಲ.

ಈ ನಿಟ್ಟಿನಲ್ಲಿ ಸಂಸದ ಅಧಿವೇಶನ ಮುಕ್ತಾಯಗೊಂಡ ನಂತರ ಶೀಘ್ರದಲ್ಲಿ ನಾವಗೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:- ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!