ಹುಕ್ಕೇರಿ: ಹಿರೇಮಠದ ಶ್ರೀ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಕ್ಕೇರಿ ತಾಲೂಕಿನ ಸಮಸ್ತ ಮಠಾಧೀಶರನ್ನು ನೇತೃತ್ವದಲ್ಲಿ ಧರ್ಮಸ್ಥಳ ಅಭಿಮಾನಿಗಳ ಬಳಗ ವತಿಯಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದರು.

ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ವರೆಗೆ ಮೆರವಣಿಗೆ ಮುಖಾಂತರ ಪ್ರತಿಭಟನೆ ನಡೆಸಲಾಯಿತು ಪದೇಪದೇ ಹಿಂದೂ ಸಂಪ್ರದಾಯ ಬಗ್ಗೆ ಹಾಗೂ ಹಿಂದುಗಳ ಬಗ್ಗೆ ಇದೆ ರೀತಿ ನಡೆಯುತ್ತಿರುವುದುನ್ನು ನಿಲ್ಲಿಸಬೇಕು.

ಧರ್ಮಸ್ಥಳ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರು ಬಹಳಷ್ಟು ಧಾರ್ಮಿಕವಾಗಿ ಕೆಲಸವನ್ನು ಮಾಡಿರುತ್ತಾರೆ ಮತ್ತು ಅವರ ಜೊತೆಗೆ ಸದಾ ನಾವು ನಿಲ್ಲುವುದಾಗಿ ಎಂದು ಹೇಳಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಅಪಪ್ರಚಾರ ಮಾಡುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈ ತೆಗೆದುಕೊಳ್ಳಬೇಕು ಮನವಿ ಪತ್ರವನ್ನು ಹುಕ್ಕೇರಿ ತಸಿಲ್ದಾರ್ ಮುಖಾಂತರ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮ.ನಿ. ಪ್ರ. ಜಗದ್ಗುರು ಪಂಚಮಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ ಸಂಸ್ಥಾನ ಮಠ ನಿಡಸೋಸಿ, ಶ್ರೀ ಪರಮಪೂಜ್ಯ ಅಭಿನವ್ ಮಂಜುನಾಥ ಸ್ವಾಮಿಗಳು ಅವಜಿಕರಮಠ ಕ್ಯಾರಗುಡ್ಡ, ಸತ್ಯಪ್ಪ ನಾಯಕ್, ಮಹಾವೀರ ನಿಲಜಿಗಿ, ಸರ್ವಧರ್ಮ ಮುಖಂಡರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೇಶಗೋಳ




