Ad imageAd image

10 ರಂದು ಬೃಹತ್ ಪ್ರತಿಭಟನೆಗೆ ಶ್ರೀ ಮಹರ್ಷಿ ವಾಲ್ಮೀಕಿ ಹೋರಾಟ ಸಮಿತಿ ನಿರ್ಧಾರ

Bharath Vaibhav
10 ರಂದು ಬೃಹತ್ ಪ್ರತಿಭಟನೆಗೆ ಶ್ರೀ ಮಹರ್ಷಿ ವಾಲ್ಮೀಕಿ  ಹೋರಾಟ ಸಮಿತಿ ನಿರ್ಧಾರ
WhatsApp Group Join Now
Telegram Group Join Now

——-ಮೊಳಕಾಲ್ಮೂರು ತಾಲೂಕಾ ಮುಖಂಡರಿಂದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಮೊಳಕಾಲ್ಮೂರು: ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಹೋರಾಟ ಸಮಿತಿ ವತಿಯಿಂದ ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಹಾನಗಲ್ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಪೂರ್ವಜರಿಂದ ಬಂದಿರುವ ವಾಲ್ಮೀಕಿ ಸಮಾಜಕ್ಕೆ ಇತರೆ ಸಮುದಾಯಗಳನ್ನು ಸೇರ್ಪಡೆಗೆ ವಿರೋಧಿಸಿ ಬರುವ ಶುಕ್ರವಾರ 10ನೇ ತಾರೀಕು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಯಾವುದೇ ಪಕ್ಷ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಶೇಕಡಾ 80% ಇರುವ ವಾಲ್ಮೀಕಿ ಸಮಾಜದವರು ಎಲ್ಲರೂ ಒಂದಾಗಿ ಪ್ರತಿಯೊಂದು ಪಂಚಾಯಿತಿಯಿಂದ ಸುಮಾರು ನೂರು ಜನರನ್ನು ಕರೆ ತರಬೇಕು. ಇದು ನಾಯಕ ಸಮುದಾಯದ ಪ್ರತಿಭಟನೆ ಯಾವುದೇ ಪಕ್ಷದ ವಿರುದ್ಧವಲ್ಲ. ದಯವಿಟ್ಟು ಮುಖಂಡರು ಯುವಕರು ಮಹಿಳೆಯರು ಎಲ್ಲರೂ ಒಂದಾಗಿ ಶುಕ್ರವಾರ ಪ್ರತಿಭಟನೆಗೆ ಭಾಗವಹಿಸಬೇಕು ಕಳಕಳಿಯ ಮನವಿ ಮಾಡಿದರು.

ಪಟ್ಟಣದಲ್ಲಿ ಮಂಗಳೂರು ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು ಕರ್ನಾಟಕದದ್ಯಂತ ಎಲ್ಲಾ ವಾಲ್ಮೀಕಿ ಸಮಾಜದ ಮುಖಂಡರು ಅವರವರ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ ನಮ್ಮ ಕ್ಷೇತ್ರದಲ್ಲಿ ಮಾತ್ರ ಯಾರೂ ಕೂಡ ಇದರ ಬಗ್ಗೆ ಗಮನಹರಿಸುತ್ತಿಲ್ಲ. ತಾಲೂಕಿನಲ್ಲಿ ಅತಿ ಹೆಚ್ಚು ವಾಲ್ಮೀಕಿ ಕುಲಬಾಂಧವರಿದ್ದು. ನಮ್ಮ ಹಕ್ಕುಗೆ ಹೋರಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ವಿವಿಧ ಕಡೆಯಿಂದ ಆಗಮಿಸಿದ ಯುವಕರು ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!