ಅಥಣಿ: 2025-26 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು 147 ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಿ ಆದೇಶಿಸಿದೆ. ಬೇವನೂರ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಂತೆ ಕಾಗವಾಡ ಮತಕ್ಷೇತ್ರದ ಶಾಸಕರು ರಾಜು ಕಾಗೆಯವರ ಪ್ರಯತ್ನದ ಫಲವಾಗಿ ಇಂದು ಅಥಣಿ ತಾಲೂಕಿನ ಕಾಗವಾಡ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೇವನೂರು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಸರ್ಕಾರಿ ಪ್ರೌಢಶಾಲೆಗೆ ೯ನೇ ತರಗತಿಯನ್ನು ಪ್ರಾರಂಭಿಸಲು ಅನುಮತಿ ದೊರೆತಿದ್ದು ಸೋಮವಾರ ದಿ: ೧ ಸಪ್ಟಂಬರ್ ೨೦೨೫ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಆರ್ ಮುಂಜಿ ರವರು ಸರಸ್ವತಿ ಫೋಟೋ ಪೂಜೆ ನೆರವೇರಿಸುವುದರ ಮೂಲಕ 9ನೇ ತರಗತಿಗೆ ಚಾಲನೆ ನೀಡಿ ಮಾತನಾಡಿದರು ವಿದ್ಯಾರ್ಥಿಗಳು ಒಂಬತ್ತು ಮತ್ತು ಹತ್ತು ತರಗತಿಗಳಿಗೆ ಬೇರೆ ಊರಿಗೆ ಹೋಗಿ ಕಲಿಯುವ ಸಂದರ್ಭ ಇತ್ತು ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಬೇಡಿಕೆಯಂತೆ ಇವತ್ತು ನಿಮ್ಮ ಗ್ರಾಮಕ್ಕೆ ಪ್ರೌಢಶಾಲೆ ಆರಂಭಿಸಿದ್ದು ನಮಗೆಲ್ಲ ಸಂತದ ಸಂಗತಿ ಎಂದರು ಆದಷ್ಟು ಬೇಗ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ತರಗತಿಗೆ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದರು.ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ G A ಖೋತ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ನಾವಿಯವರು 9ನೇ ತರಗತಿ ಮಕ್ಕಳಿಗೆ ಪುಷ್ಪಗುಚ್ಛ ನೀಡುವುದರೊಂದಿಗೆ ತರಗತಿಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಅಮುಸಿದ್ದ ಚೌಗಲಾ ಬಾಬುರಾವ್ ಝಂಡೆ ಊರಿನ ಹಿರಿಯರಾದ ಶಿವಾಜಿ ಯಮಗಾರ ವಕೀಲರಾದ ದಯಾನಂದ ವಾಘಮೋರೆ ವಕೀಲರಾದ ರಾವಸಾಬ ಕೊಕರೆ ಮಲಾಬಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅನಿಲ ಸಂತೆ ಶಾಲೆಯ ಪ್ರಧಾನ ಗುರುಗಳಾದ ವಿಲಾಸ . ಎಸ್ ಪೆಡ್ನೇಕರ್. ಬಾಬು ಝೆಂಡೆ. ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಯಮಗಾರ ಸದಾಶಿವ ವಾಘಮಾರೆ .ಶ್ರೀಮತಿ ದ್ರಾಕ್ಷಾಯಿಣಿ ಕಿರಳೆ ,ಶ್ರೀಮತಿ ವರ್ಷಾ ಪವಾರ,ಹಾಗೂ SDMC ಸದಸ್ಯರುಗಳಾದ ಅಮಸಿದ್ದ ಪೂಜಾರಿ,ರಾಮಚಂದ್ರ ಕಂಬಾರ, ಗ್ರಾಮಸ್ಥರಾದ ಅಪ್ಪಾಸಾಬ ನಾಯಿಕ, ಶ್ರೀಕಾಂತ ಪಾಟೀಲ, ಲಕ್ಷ್ಮಣ ನಾಯಿಕ, ಅಶೋಕ ಪಾಟೀಲ, ಮಾರುತಿ ಕಿರರಳೆ. ಹಾಗೂ ಶಿಕ್ಷಕರು ದೀಪಕ್ ಸಿ ಎನ್ ಪಿ ಎಂ ಸನದಿ ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ರಾಜು ವಾಘಮಾರೆ




