Ad imageAd image

ಬಿಜೆಪಿ ಕೆಲಸ ನೋಡಿದ್ದೀರಿ, ನನಗೊಂದು ಅವಕಾಶ ಕೊಡಿ – ಮೃಣಾಲ ಹೆಬ್ಬಾಳಕರ್

Bharath Vaibhav
ಬಿಜೆಪಿ ಕೆಲಸ ನೋಡಿದ್ದೀರಿ, ನನಗೊಂದು ಅವಕಾಶ ಕೊಡಿ – ಮೃಣಾಲ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ : ಕಳೆದ 20 ವರ್ಷ ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ. ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಮಾರ್ಕಂಡೇಯ ನಗರದಲ್ಲಿ ಶುಕ್ರವಾರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೆಲಸಗಳು ಭಿನ್ನವಾಗಿರುತ್ತವೆ. ಕೇಂದ್ರದಿಂದ ದೊಡ್ಡ ದೊಡ್ಡ ಯೋಜನೆಗಳನ್ನು ತರಲು ಅವಕಾಶವಿರುತ್ತದೆ. ಇದರಿಂದ ನಮ್ಮ ಪ್ರದೇಶದ ಅಭಿವೃದ್ಧಿಯಾಗುತ್ತದೆ, ಯುವಕರಿಗೆ ಉದ್ಯೋಗ ಸಿಗುತ್ತದೆ. ಆದರೆ ಕಳೆದ 4 ಅವಧಿಯಲ್ಲಿ ಬೆಳಗಾವಿಯನ್ನು ಪ್ರತಿನಿಧಿಸಿದ ಸಂಸದರಿಂದ ಜನರು ನಿರೀಕ್ಷೆ ಮಾಡಿದ್ದಷ್ಟು ಕೆಲಸಗಳಾಗಿಲ್ಲ. ಯಾರದ್ದೋ ಮುಖ ನೋಡಿ ಮತ ಹಾಕುವುದಕ್ಕಿಂತ ನಮ್ಮಿಂದ ಆಯ್ಕೆಯಾದವರು ನಮಗೆ ಏನು ಮಾಡಬಲ್ಲರು ಎನ್ನುವುದನ್ನು ಯೋಚಿಸಬೇಕು ಎಂದು ಅವರು ಹೇಳಿದರು.
ನಾನು ವಿದ್ಯಾವಂತನಾಗಿದ್ದು, ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಇದೆ. ನಮ್ಮೂರಿನ ಮಕ್ಕಳ ಇಲ್ಲೇ ಉದ್ಯೋಗ ಮಾಡಿದರೆ ತಂದೆ, ತಾಯಿಗಳಿಗೂ ಆಸರೆಯಾಗುತ್ತಾರೆ. ಅಂತಹ ಅವಕಾಶ ಕಲ್ಪಿಸಲು ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡುತ್ತೇನೆ. ಯುವಕರು ಉದ್ಯಮಿಗಳಾಗಲು ಪ್ರೋತ್ಸಾಹ ಮತ್ತು ತರಬೇತಿ ಒದಗಿಸಲಾಗುವುದು. ಶೈಕ್ಷಣಿಕ ಅವಕಾಶಗಳನ್ನೂ ಕಲ್ಪಿಸಲಾಗುವುದು. ಹಾಗಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿರುವ ಹಸ್ತಕ್ಕೆ ಮತ ನೀಡುವ ಮೂಲಕ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಅವರು ವಿನಂತಿಸಿದರು.

ಗ್ರಾಮದ ಹಿರಿಯರು ತಲೆಯ ಮೇಲೆ ಕೈ ಇಟ್ಟು ಆಶಿರ್ವಾದ ಮಾಡಿದರು. ಖಂಡಿತ ನಮ್ಮೆಲ್ಲರ ಮತವನ್ನು ನಿಮಗೆ ನೀಡುತ್ತೇವೆ ಎಂದು ಭರವಸೆ ನೀಡಿದರು. ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಹಿರಿಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!