Ad imageAd image

ಗುರುಮಠಕಲ್ ಅಲೆಮಾರಿ ಬುಡ್ಗ ಜಂಗಮ ಜಾತಿಯ ಇಬ್ಬರು ಯುವತಿಯರ ಸಾವಿಗೆ ನ್ಯಾಯಾ ಒದಗಿಸಲು MRPS ಆಗ್ರಹ

Bharath Vaibhav
ಗುರುಮಠಕಲ್ ಅಲೆಮಾರಿ ಬುಡ್ಗ ಜಂಗಮ ಜಾತಿಯ ಇಬ್ಬರು ಯುವತಿಯರ ಸಾವಿಗೆ ನ್ಯಾಯಾ ಒದಗಿಸಲು MRPS ಆಗ್ರಹ
WhatsApp Group Join Now
Telegram Group Join Now

ಯಾದಗಿರಿ : ಗುರುಮಠಕಲ್ ತಾಲೂಕಿನ ಇಂದಿರಾ ನಗರ ಅಲೆಮಾರಿ ಬುಡ್ಗ ಜಂಗಮ ಜಾತಿಯ ಇಬ್ಬರು ಯುವತಿಯರ ಸಾವು ಸಂಶಯಾಸ್ಪವಾಗಿದ್ದು, ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಗುರುಮಠಕಲ್ ಮತ್ತು ಯಾದಗಿರಿ MRPS ವತಿಯಿಂದ ಮತ್ತು ವಿವಿಧ ದಲಿತಪರ ಪ್ರಗತಿಪರ ಸಂಘಟನೆಗಳಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

 

ಯಾದಗಿರಿ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಮುತ್ತಿಗೆ ಹಾಕಿ ಪ್ರತಿಭಟನೆ, ಮಾಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ತಲುಪಿ ಮನವಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ MRPS ಗುರುಮಠಕಲ್ ತಾಲೂಕಾ ಅಧ್ಯಕ್ಷ ರವಿ ಬೂರನೂಳ ಗುರುಮಠಕಲ್‌ ಪಟ್ಟಣದ ಇಂದಿರಾ ನಗರದ ವಾರ್ಡ್‌ ನಂ. 10 ರ ಅಲೆಮಾರಿ ವೇಷಗಾರ ಸಮುದಾಯದ ಇಬ್ಬರು ಯುವತಿಯರಾದ ಶ್ಯಾಮಮ್ಮ ಹುಸೇನಪ್ಪ ಸಿರಿಗಿರಿ (19), ಸಾಯಮ್ಮ ಭೀಮಪ್ಪ ಅಗಸ್ತ (15) ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಮನೆಯಿಂದ ಚಿಂದಿ ಆಯಲು ಹೋಗಿ ಫೆಬ್ರುವರಿ 12ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಇಬ್ಬರ ಶವವು ಸಿಕ್ಕಿರುತ್ತದೆ. ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

ಈಚೆಗೆ ಒಂದು ತಿಂಗಳ ಹಿಂದೆ ಗುರುಮಠಕಲ್ ಪಟ್ಟಣದಲ್ಲಿ ಚಿಂದಿ ಆಯುತ್ತಿದ್ದಾಗ ಮುಸ್ಲಿಂ ಕೋಮಿನೀತಿಗೆ ಸೇರಿದ ಶೇಖ್ ಹುಸೇನ್ ಎಂಬವನು ಯುವತಿಯ ಕೈಹಿಡಿದು ಎಳೆದಾಡಿದ್ದು, ಆಗ ಶಾಮಮ್ಮ ಅವನಿಗೆ ನಾಡು ರಸ್ತೆಯಲ್ಲಿ ಚೆಪ್ಪಲಿಯಿಂದ ಹೊಡೆದಿದ್ದಾಳೆ. ನಂತರ ಅವನು ಬಾಲಕಿಯರ ಬೆನ್ನುಬಿದ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಎಸೆದಿರುವ ಅನುಮಾನವಿದ್ದು, ವಿಶೇಷ ತಂಡ ರಚಿಸಿ ತನಿಖೆ ನಡೆಸುಂತೆ MRPS ನವರು ಒತ್ತಾಯಿಸಿದರು.

ಯುವತಿಯರ ಸಾವು ಅನುಮಾನಕ್ಕೀಡು ಮಾಡಿಕೊಟ್ಟಿದ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿರುವ ಬಗ್ಗೆ ಸಂಶಯವಿದೆ. ಈ ಘಟನೆ ನಂತರ ಕೆಲವು ಅಪರಿಚಿತ ವ್ಯಕ್ತಿಗಳು ಇಂದಿರಾ ನಗರದ ಗುಡಿಸಲಿಗಳಿಗೆ ಬಂದು ನೀವೇನಾದರೂ ಕೇಸ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು, ಜೀವ ಬೆದರಿಕೆ ಹಾಕಿದ್ದು, ಕುಟುಂಬದವರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಹೀಗಾಗಿ ತನಿಖೆ ನಡೆಸಬೇಕು ಮತ್ತು ಅವರಿಗೆ ಕೊಡಲೇ ಪೊಲೀಸ್ ಬಂದಬಸ್ತ್ ಮಾಡಿಕೊಡಬೇಕೆಂದು ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ

ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಬಡ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ. ಐವತ್ತು ಲಕ್ಷ ರುಪಾಯಿಗಳನ್ನು ಒದಗಿಸಬೇಕು ಕುಟುಂಬದವರಿಗೆ ನೌಕರಿ ಕೊಡಬೇಕು.ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಅಲೆಮಾರಿ ಬುಡಕಟ್ಟು ಸಮಾಜದ ಅಧ್ಯಕ ಅಂಜಿ. MRPS ಜಿಲ್ಲಾ ಉ.ಅಧ್ಯಕ್ಷ ಮಲ್ಲು ಬೆಳಿಗೇರ. ಸುರುಪೂರ್ ತಾಲೂಕಾ ಅಧ್ಯಕ್ಷ ಬಾಸು ಗುರುಮಠಕಲ್ ಗೌವರ್ ಅಧ್ಯಕ್ಷ ವೆಂಕಟೇಶ್. ನರಸಪ್ಪ ಇಮಲಪುರ ಮಹದೇವ್ ಗಜರಕೋಟ್ . ಅನಿಲ್ ಬಸಪೋಳ. ಅಂಬೇಡ್ಕರ್ ಯುವ ಸೇನೆ ತಾಲೂಕಾ ಅಧ್ಯಕ್ಷ ಶ್ರೀಕಾಂತ್ ತಾಲರಿ.ಭೀಮಶಪ್ಪ್ ಮೀನಿಂಟಿ. ದೆವು ಯಂಪಾಡ. ದೇವು ಸೇರಿದಂತೆ ಅನೇಕ ತಾಲೂಕಾ ಮಟ್ಟದ ಪದಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಗ್ರಾಮ ಘಟಕ ಅಧ್ಯಕ್ಷ ಭಾಗಿಯಾಗಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!