ಬಾದಾಮಿ : ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀಮತಿ ಡಾ! ಜುಬೇದಾ.ಎಂ.ಬದಾಮಿ ಶಿಕ್ಷಕಿಯರು ಸಾಹಿತಿಗಳು ಇವರಿಗೆ ಕ ಜ್ಞಾ ವಿ ಸ ವತಿಯಿಂದ ಅನಿತಾ ಕೌಲ್(ಐ ಎ ಎಸ್ ಅಧಿಕಾರಿ ದಿವಂಗತ) ಸ್ಮರಣಾಥ೯ವಾಗಿ ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು ಬಾಗಲಕೋಟೆ ಜಿಲ್ಲೆಗೆ ಹಾಗೂ ಬಾದಾಮಿ ತಾಲೂಕಿಗೆ ಹೆಮ್ಮೆಯ ವಿಷಯ ಎನ್ನಬಹುದು.
ಇವರು ಮಕ್ಕಳ ಸಾಹಿತಿಗಳಾಗಿದ್ದು ಸಾಹಿತ್ಯ ಸೇವೆಯಲ್ಲಿ ತಮ್ಮ ಪರಿವಾರವನ್ನೇ ತೊಡಗಿಸಿಕೊಂಡು ಕನ್ನಡದ ಅಭಿಮಾನಕ್ಕೆ ಹೆಮ್ಮೆಯನ್ನು ತಂದುಕೊಟ್ಟಿರುತ್ತಾರೆ ಇವರು ಹಲವಾರು ಸಂಘ ಸಂಸ್ಥೆಗಳ ನಿದೇ೯ಶಕಿಯರಾಗಿದ್ದು, ಸಮಾಜ ಸೇವೆ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ಕಾಯ೯ಕ್ರಮ ಗಳನ್ನು ಮಾಡುತ್ತಾ ಬಂದಿರುತ್ತಾರೆ. ವೃತ್ತಿ ಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಂಡು ರಾಜ್ಯದಲ್ಲಿ ಹಲವಾರು ಎಲೆಮರೆಯ ಕಾಯಿಯಂತಿರುವವರನ್ನು ಮುಖ್ಯ ವೇದಿಕೆಗಳಿಗೆ ಕರೆದೊಯ್ದು ಹಲವಾರು ಗೌರವ ಸನ್ಮಾನ ಮಾಡುತ್ತಾ ಬಂದಿರುತ್ತಾರೆ. ಇವರ ಕಾಯ೯ ವೈಖರಿಯನ್ನು ಪರಿಗಣಿಸಿ ರಾಜ್ಯದ ಸಂಚಾಲಕರನ್ನಾಗಿಸಿ ಕಾಸರಗೋಡು ಕನ್ನಡ ಭವನದ ರಾಜ್ಯ ನಿದೇ೯ಶಕಿಯರನ್ನಾಗಿ ಆಯ್ಕೆ ಮಾಡಲಾಗಿದೆ. ಇವರ 5 ಕೃತಿಗಳು ಪ್ರಕಟಗೊಂಡಿದ್ದು ರಾಜ್ಯದ ಹಲವಾರು ವೇದಿಕೆಯಲ್ಲಿ ಪ್ರಾಥ೯ನೆ ನಿರೂಪಣೆ ಪ್ರಾಸ್ತಾವಿಕ ನುಡಿಗಳನ್ನು ಕೂಡ ಮಾಡುತ್ತಾ ಬಂದಿರುತ್ತಾರೆ. ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೆ ಅವರ ಪತಿಯವರಾದ ಶ್ರೀ ಜೆ ಕೆ ಹುಸೇನಭಾಯಿ ಶಿಕ್ಷಕರು ಮತ್ತು ಮಕ್ಕಳಾದ ಸನಾ, ಜಾವೇದ್, ಎಂ ಡಿ ಅಜರ್, ಅಶ್ವಿನಿ ರಮೇಶ್ ಎಲ್ಲರೂ ಒಂದುಗೂಡಿ ಕನ್ನಡಾಂಬೆಯ ಸೇವೆ ಮಾಡುವಂತೆ ಮಾಗ೯ದಶ೯ನ ನೀಡುತ್ತಾ ಬಂದಿರುತ್ತಾರೆ. ನಿಜವಾಗಿಯೂ ಇವರು ಚಾಲುಕ್ಯರ ನಾಡಿನ ಹೆಮ್ಮೆಯ ಕನ್ನಡತಿ ಎಂದೇ ಖ್ಯಾತಿಯನ್ನು ಗಳಿಸಿ ಕೊಂಡಿದ್ದಾರೆ.
ಇವರಿಗೆ ರಾಷ್ಟ್ರ ಮಟ್ಟದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಫುಲೆ ಪ್ರಶಸ್ತಿ ವಿಜೇತರು, ಇವರ ಸೇವೆ ಶ್ಲಾಘನೀಯ ಇವರಿಗೆ ಜಾಲಿಹಾಳ, ಆಲೂರ ಎಸ್ ಕೆ, ಚೊಳಚಗುಡ್ಡ, ಮುತ್ತಲಗೇರಿ, ಬಾದಾಮಿಯ ಗುರು ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇವರ ಸೇವೆ ಇನ್ನೂ ಉತ್ತುಂಗಕ್ಕೆ ಏರಲಿ ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸುವಂತಹ ಶಕ್ತಿಯನ್ನು ದೇವರು ಕರುಣಿಸಲಿ ಎನ್ನುವುದು ಅವರ ಅಪಾರ ಅಭಿಮಾನಿಗಳ ಹಾರೈಕೆಯಾಗಿದೆ.
ವರದಿ: ರಾಜೇಶ್. ಎಸ್. ದೇಸಾಯಿ