ಗುರುಮಾಠಕಲ್ : ಯಾದಗಿರಿ ಜಿಲ್ಲೆಯ ನೂತನವಾಗಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರೀ ಮತಿ ರೇಖಾ ಮುತ್ತಿಗಿ ಅವರನ್ನು ಹೊರಗುತ್ತಿಗೆ ರಾಜ್ಯ ಅಧ್ಯಕ್ಷರಾದ ಸುಧಾಕರ ಯಾದವ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆಯಡಿ ಗಣಕಯಂತ್ರ ನಿರ್ವಾಹಕರಾದ ರೇಖಾ ಮುತ್ತಗಿ(ಸುಲೇಗಂ) ರವರನ್ನು ಯಾದಗಿರ ಜಿಲ್ಲೆಯ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಶ್ರೀ.ಸುಧಾಕರ ಯಾದವ ನೇಮಕ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಪಲ್ಲಾಡಿಯಮ್ ಹೋಟೆಲ್ ನಲ್ಲಿ ನಡೆದ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಎಲ್ಲಾ ಜಿಲ್ಲೆಯ ಹೊರಗುತ್ತಿಗೆ ನೌಕರರ ಒಂದು ದಿನದ ಜಿಲ್ಲಾಧ್ಯಕ್ಷರ ಜಾಗೃತಿ ಸಭೆಯನ್ನು ಶನಿವಾರ ರಂದು ನಡೆಸಿ ಎಲ್ಲಾ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘವನ್ನು ಉದ್ದೇಶದಿಂದ ಸಂಘವನ್ನು ಆಸ್ಥಿತ್ವಕ್ಕೆ ತರಬೇಕೆಂದು ಎಲ್ಲಾ ಜಿಲ್ಲಾಧ್ಯಕ್ಷರನ್ನಾಗಿ ಆದೇಶ ಹೊರಡಿಸಿ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರುಗಳಿಗೆ ಸನ್ಮಾನಿಸಿ ನೆನಪಿನ ನೀಡಿ ಯಾದಗಿರ ಜಿಲ್ಲೆಯ ಯಾದಗಿರ, ಶಹಾಪೂರ, ಸುರಪೂರ & ಗುರುಮಠಕಲ್ ತಾಲ್ಲೂಕಿನ ಎಲ್ಲಾ ಸರಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಹೊರಗುತ್ತಿಗೆ ನೌಕರರಿಗೆ ಸಹಾಕರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಸಂಘದ ರಾಜ್ಯಾಧ್ಯಕ್ಷರು ಶ್ರೀ.ಮಹಾಲಿಂಗೇಗೌಡ್ರು,ಮುದ್ದನಘಟ್ಟ ಮಾಜಿ ಶಾಸಕರು ಶ್ರೀ.ರಾಘವೇಂದ್ರರೆಡ್ಡಿ ಮಾನವ ಸಂಪನ್ಮೂಲ ಸಂಘದ ಪ್ರಧಾನ ಕಾರ್ಯದರ್ಶಿ,ಶ್ರೀ.ನಾಗಪ್ಪ ಕವಲೂರ ಮಾನವ ಸಂಪನ್ಮೂಲ ಸಂಘದ ಕಾರ್ಯದರ್ಶಿಗಳು,ಡಿ.ಪರಮೇಶ್ವರ, ಹೈಕೋರ್ಟ ವಕೀಲರಾದ ಶ್ರೀ.ಮುನಿರಾಜ್, ಹಾಗೂ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷರು ಶ್ರೀ.ಗಂಗಾಧರ್ ರವರು . ಮಹಿಳಾ ಘಟಕ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್




