ಯಳಂದೂರು : ತಾಲ್ಲೋಕಿನ ಮದ್ದೂರು ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆ ನೆಡೆಸಲಾಯಿತು, ಅಧ್ಯಕ್ಷರ ಚುನಾವಣೆಗೆ ಶ್ರೀಮತಿ ರೂಪ ನಾಗಣ್ಣ ರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿಯಾದ ಪಶುಸಂಗೋಪನ ಇಲಾಖೆಯ ಅಧಿಕಾರಿಯಾದ ಡಾ. ಶಿವರಾಜು ರವರು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನೆಡೆಸಿ ಅಧ್ಯಕ್ಷರಾಗಿ ರೂಪರವರು ಆಯ್ಕೆಯಾಗಿದ್ದರೆ ಎಂದು ತಿಳಿಸಿದರು
ಅಧ್ಯಕ್ಷರಾದ ಶ್ರೀಮತಿ ರೂಪ ನಾಗಣ್ಣ ರವರು ಮಾತನಾಡಿ ನಾನು ಗ್ರಾಮ ಪಂಚಾಯಿತಿಯ ಅಭಿವೃದಿಗೆ ಶ್ರಮಿಸುತ್ತೆನೆ ನನ್ನನು ಆಯ್ಕೆ ಮಾಡಿದ ಎಲ್ಲಾ ಸದ್ಯಸರಿಗೂ ಧನ್ಯವಾದಗಳು ಎಂದು ತಿಳಿಸಿದರು
ಮಾಜಿ ಶಾಸಕರಾದ ಎಸ್ ಬಾಲರಾಜು ರವರು ಮಾತನಾಡಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಶುಭ ಕೋರಿದರು
ಈ ಸಂದರ್ಭದಲ್ಲಿ ಸದ್ಯಸರುಗಳಾದ ಮಂಜುಳಾ, ಚಂದ್ರಕಲಾ, ನಂದಿನಿ, ಪರಮೇಶ್, ಚಂದ್ರಮ್ಮ, ಶಿವಕುಮಾರ್, ಮಲ್ಲಿಕಾರ್ಜುನ, ಪ್ರಕಾಶ್, ವೆಂಕಟರಮಣಸ್ವಾಮಿ, ಹಾಗೂ ಪಿ ಡಿ ಒ ನಟರಾಜು, ಗ್ರಾಮಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




