Ad imageAd image

ಶಿಕ್ಷಣದ ಮೌಲ್ಯಗಳಿಂದ, ಸಧೃಡ ಸಮಾಜ ನಿರ್ಮಾಣ: ವಿಶ್ರಾಂತ ನ್ಯಾಯಾಧೀಶ ಎಂಎಸ್ ಪಾಟೀಲ ಅಭಿಮತ

Bharath Vaibhav
ಶಿಕ್ಷಣದ ಮೌಲ್ಯಗಳಿಂದ, ಸಧೃಡ ಸಮಾಜ ನಿರ್ಮಾಣ: ವಿಶ್ರಾಂತ ನ್ಯಾಯಾಧೀಶ ಎಂಎಸ್ ಪಾಟೀಲ ಅಭಿಮತ
WhatsApp Group Join Now
Telegram Group Join Now

ಕಿತ್ತೂರು: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ
2024 -25ನೇ ಸಾಲಿನ ಕೆಪಿಎಂ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಅವರು ಮಾತನಾಡುತ್ತಾ ಜೀವನದಲ್ಲಿ ಬಡತನ ಮತ್ತು ಹಸಿವು ಅನೇಕ ಪಾಠ ಗಳನ್ನು ಕಲಿಸುತ್ತದೆ ಆ ಕಹಿ ಅನುಭವ ಬಾರದಂತೆ ಜಾಗೃತಿ ವಹಿಸಲು ಪ್ರಮುಖ ಅಸ್ತ್ರವೆ ಶಿಕ್ಷಣ ಇದನ್ನು ಸಮಯೋಚಿತವಾಗಿ ಕಲಿತಾಗ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಜೀವನ ನಡೆಸಲು ಸಾಧ್ಯ . ತಾನು ತನಗೆ ಕಲಿಸಿದ ಗುರುಗಳು, ಹೆತ್ತ ತಂದೆ ತಾಯಿಗಳನ್ನು ಗೌರವಿಸುವ ಮೌಲ್ಯ ಶಿಕ್ಷಣವನ್ನು ಪಡೆದಲ್ಲಿ ನನ್ನ ಹಾಗೆ ತಾವು ಕೂಡ ಉನ್ನತ ಸ್ಥಾನವನ್ನು ಗಳಿಸುವ ಮೂಲಕ ಸಧೃಡ ಸಮಾಜದ ನಿರ್ಮಾಣದ ಕನಸನ್ನು ಕಾಣಬಹುದಾಗಿದೆ. ಅಂದಾಗ ಮಾತ್ರ ವೈಯಕ್ತಿಕ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ ಎಂದು ವಿಶ್ರಾಂತ ನ್ಯಾಯಾಧೀಶರಾದ ಎಂ ಎಸ್ ಪಾಟೀಲ ರವರು ವಿದ್ಯಾರ್ಥಿಗಳಿಗೆ ಅನೇಕ ದೃಷ್ಟಾಂತಗಳ ಮೂಲಕ ಜೀವನದ ಮೌಲ್ಯಗಳನ್ನ ಯಾರು ರೂಡಿಸಿಕೊಂಡು ಬದುಕುತ್ತಾರೋ ಅವರು ಯಶಸ್ವಿ ಬದುಕನ್ನು ನಿರ್ವಹಿಸಬಲ್ಲರು. ತಾವೆಲ್ಲರೂ ತಂದೆ -ತಾಯಿ, ಗುರುಗಳನ್ನ ನಿತ್ಯ ಗೌರವಿಸುವ ಪರಿಪಾಠವನ್ನು ರೂಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಶಾಲೆಯ ಸಮಾರಂಭದಲ್ಲಿ ಪಾಲ್ಗೊಂಡು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಗುರುಸ್ಮರಣೆಯ ಕಾರ್ಯಕ್ರಮವನ್ನು ಕಂಡು ಬೆರಗಾಗಿದ್ದೇನೆ,ಇಂತಹ ಸನ್ನಿವೇಶ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಧನ್ಯರು ಏಕೆಂದರೆ ಸಂಸ್ಕಾರ, ಸಂಸ್ಕೃತಿಯ ಪರಂಪರೆಯ ಅಂಶಗಳನ್ನು ಕಲಿತುಕೊಂಡು ತಾವು ಮುಂದೆ ಬಂದು ಉನ್ನತ ಅಧಿಕಾರಿಗಳಾಗಿ ಉನ್ನತವಾದ ಬದುಕಿನ ಜೊತೆಯಲ್ಲಿ ಸಮ ಸಮಾಜ ಕನಸನ್ನು ಕಟ್ಟಿಕೊಳ್ಳಲು ಈ ಶಿಕ್ಷಣದ ಮೌಲ್ಯಗಳು ನಿಮಗೆ ಸಂಜೀವಿನಿ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿಂಗಪ್ಪ ಮೊಕಾಶಿ ವಹಿಸಿದ್ದರು. ಉದ್ಘಾಟಕರಾಗಿ, ಸಹಕಾರಿ ದುರಿಣರಾದ ನಾನಾಸಾಹೇಬ್ ಪಾಟೀಲ್ ರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಮುಂದುವರಿದ ಮಾತನಾಡುತ್ತಾ ವಿದ್ಯ ಕದಿಯಲಾರದ ಸಂಪತ್ತು ಅದನ್ನು ಅಂಗಡಿಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ, ಅದು ಗುರು ಭಕ್ತಿ ಮತ್ತು ಶಾಲೆಗಳಿಂದ ಮಾತ್ರ ಪಡೆಯಲು ಸಾಧ್ಯವಿದೆ ಎಂದು ಹೇಳಿದರು, ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ವೈ ತುಬಾಕಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಭಯ ನಿವಾರಣೆಗೆ ಪ್ರಸಕ್ತ ಸಾಲಿನಲ್ಲಿ ಕಿತ್ತೂರು ತಾಲ್ಲೂಕಿನಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಫಲಿತಾಂಶದ ಜೊತೆಗೆ ವೈಯಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಹೆಚ್ಚಿನ ಅಂಕ ಪಡೆಯಲು ಪ್ರೇರಣಾ ಶಿಬಿರ ಹಾಗೂ ಸರಣಿ ಪರೀಕ್ಷೆಗಳನ್ನ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಬಲರನ್ನಾಗಿ ಮಾಡುವಲ್ಲಿ ಈ ತಾಲೂಕಿನ ಹಾಗು ಈ ಶಾಲೆಯ ಎಲ್ಲಗುರುಂದದವರು ಅತ್ಯಂತ ಮುತವರ್ಜಿ ವಹಿಸಿದ್ದು, ಫಲಿತಾಂಶ ವೃದ್ಧಿಗೆ ಸಹಕಾರಿಯಾಗಲಿದೆ. ಭವಿಷ್ಯದಲ್ಲಿ ತಾವೆಲ್ಲರೂ ಉತ್ತಮ ಅಂಕ ಪಡೆದು ಪಾಸಾಗಲು ಕರೆ ನೀಡಿದರು, ವೇದಿಕೆಯಲ್ಲಿ ಹಿರಿಯರಾದ ಬಸಪ್ಪಣ್ಣ ಕಲ್ಲೂರ, ಕಿತ್ತೂರಿನ ಪೊಲೀಸ್ ಅಧಿಕಾರಿಗಳಾದ ಪ್ರವೀಣ್ ಗಂಗೋಳ ಹಾಗೂ ಎಸ್ಡಿಎಂಸಿ ಸದಸ್ಯರಾದ ಬಸಲಿಂಗಪ್ಪ ಶಹಪೂರ, ರುದ್ರಪ್ಪ ಮಣ್ಣಿಕೇರಿ, ಪ್ರಭಾಕರ ಕುಲಕರ್ಣಿ, ಸಿದ್ದಣ್ಣ ಹುಲಮನಿ, ಬಸನಗೌಡ ಪಾಟೀಲ ಯಡಾಲ, ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಶಾಲೆಗೆ ಸೈರನ್ ಹಾಗೂ ಫ್ಯಾನ್ ಕಾಣಿಕೆಯಾಗಿ ನೀಡಿದರು. ಕಳೆದ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ನಿಧಿ ಹಾಗೂ ಶಿಕ್ಷಕರ ವತಿಯಿಂದ ವಿಷಯವಾರು ಬಹುಮಾನಗಳನ್ನ ನೀಡಲಾಯಿತು. ದಾನಿಗಳಾದ ಸಚಿನ್ ಕುರಿ ಬಂಧುಗಳು ಶಾಲೆಗೆ ಫ್ಯಾನ್ ದೇಣಿಗೆಯಾಗಿ ನೀಡಿದರು, ವಿದ್ಯಾರ್ಥಿಗಳು ಗುರುಗಳ ಸ್ಮರಣೆ ಸ್ಮರಣೆ ನಿಮಿತ್ತ ಗುರು ಸನ್ಮಾನವನ್ನ ಮಾಡುವ ಮೂಲಕ ತಮ್ಮಲ್ಲಿರುವ ಗುರು ಭಕ್ತಿ ಹಾಗೂ ಸಂಪ್ರದಾಯ ವಿಶೇಷ ಗಮನಸೆಳೆಯಿತು, ನಂತರ ಪ್ರಸಕ್ತ ಸಾಲಿನ ಆದರ್ಶ ವಿದ್ಯಾರ್ಥಿಯಾಗಿ ಕುಮಾರ, ನಂದನ್ ಮನ್ನಿಕೇರಿ ಹಾಗೂ ಕಲ್ಪನಾ ಎದ್ದಲಗುಡ ಆಯ್ಕೆ ಮಾಡಲಾಯಿತು, ಇಂಗ್ಲಿಷ್ ವಿಷಯದಲ್ಲಿ ಕಳೆದ ಸಾಲಿನಲ್ಲಿ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ ಎಸ್ ಬಿ ಹಲಸಗಿಯವರು ತಲಾ ಐನೂರು ರೂಪಾಯಿಗಳ ನಗದು ಬಹುಮಾನವನ್ನು ಹಾಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಿದರು ಇದೇ ರೀತಿಯಾಗಿ ಹಲವಾರು ದಾನಿಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಹುಮಾನಗಳನ್ನು ನೀಡಿದರು. ಪ್ರಾರಂಭದಲ್ಲಿ ಮಕ್ಕಳಿಂದ ಪ್ರಾರ್ಥನೆ ಜರುಗಿತು ಮುಖ್ಯಶಿಕ್ಷಕ ಜಿ ಎಚ್ ನಾಯಕ ಸ್ವಾಗತಿಸಿದರು, ಶ್ರೀಮತಿ ಎಸ್ ಕೆ ಕದಂ ಹಾಗೂ ಶ್ರೀಮತಿ ಏ ಎಸ್ ಅಡಕಿ ವಿತರಿಸಿದರು ಶ್ರೀಮತಿ ಎಲ್‌ ಕೆ ಕನಬರಗಿ ವರದಿ ವಾಚನ ಮಾಡಿದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಕೊನೆಯಲ್ಲಿ ಬಿಎಸ್ ಪಾಟೀಲ ವಂದಿಸಿದರು, ಎಸ್ ಎಸ್ ಹಿರೇಮಠ ನಿರೂಪಿಸಿದರು, ಕಾಂಚಾಣ ಕದ್ದು ರಾಧಾ ಬಾಗಲಕೋಟ ಪಾಲಕರು ಪೋಷಕರು ಉಪಸ್ಥಿತರಿದ್ದರು ಯಶಸ್ವಿಯಾಗಿ ಸ್ನೇಹ ಸಮ್ಮೇಳನ ಜರುಗಿತು.

   ವರದಿ: ಬಸವರಾಜು

WhatsApp Group Join Now
Telegram Group Join Now
Share This Article
error: Content is protected !!