ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಆರೋಪದ ಬಗ್ಗೆ ರಾಜ್ಯ ಬಿಜೆಪಿಯು ಕನ್ನಡದ ಕೋಟ್ಯಾಧಿಪತಿ ಯಾರು ಎಂಬ ಮಾದರಿಯಲ್ಲೇ ಮುಡಾ ಹಗರಣದ ಲೂಟ್ಯಾಧಿಪತಿ ಯಾರು ಎಂದು ಟೀಕಿಸುವ ಮೂಲಕ ಪ್ರಶ್ನೆ ಎತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ, ಸಮಾಜವಾದಿ ಮುಖವಾಡ ಧರಿಸಿಕೊಂಡೇ, ನಿವೇಶನ ರಹಿತ ಬಡವರಿಗೆ ಹಂಚಬೇಕಿದ್ದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಶನಗಳನ್ನು ಅಕ್ರಮವಾಗಿ ಕಬಳಿಸಿರುವ ಮಜವಾದಿ ಯಾರು? ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ ಎಂದಿರುವ ಬಿಜೆಪಿಯು, 4 ಆಯ್ಕೆಗಳನ್ನು ವ್ಯಂಗ್ಯವಾಗಿ ನೀಡಿದೆ.
ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಡವರ ನಿವೇಶನಗಳನ್ನು ಅಕ್ರಮವಾಗಿ ಬಳಿಸಿದ ಸಾವಿರಾರು ಕೋಟಿ ರೂಪಾಯಿ ಹಗರಣದ ರೂವಾರಿ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಸಚಿವ ಬೈರತಿ ಸುರೇಶ್ ಇಲ್ಲವೇ ಸಚಿವ ಜಿ.ಪರಮೇಶ್ವರ್ ಎಂದು ಕೇಳಿದೆ. ಇದಕ್ಕೆ ಸರಿಯಾದ ಉತ್ತರ ಸಿದ್ದರಾಮಯ್ಯ ಎಂದು ಬಿಜೆಪಿಯೇ ಆರೋಪಿಸಿದೆ.