ಬೆಂಗಳೂರು: ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣ ರಾಷ್ಟ್ರಪತಿಗಳ ಅಂಗಳ ತಲುಪಿದೆ. ರಾಜ್ಯಪಾಲರು ರಾಜ್ಯದ ವಿದ್ಯಮಾನಗಳ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಕೇಂದ್ರ ಗೃಹ ಸಚಿವಾಲಯಕ್ಕೂ ರಾಜ್ಯಪಾಲರು ವಿವರಣೆ ನೀಡಿದ್ದಾರೆ.ಮುಡಾ ಹಗರಣದ ವಿಚಾರವಾಗಿ ನಡೆದ ಪ್ರತಿಭಟನೆ ಮತ್ತು ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ನೀಡಿದ್ದಾರೆ.
ರಾಜಭವನದ ಮೇಲೆ ರಾಜ್ಯ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ. ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಲಾಗಿದೆ. ಹಲವೆಡೆ ಪ್ರತಿಕೃತಿ ದಹನ, ಕಾಂಗ್ರೆಸ್ ನಾಯಕರಿಂದ ರಾಜಭವನಕ್ಕೆ ನುಗ್ಗುವ ಬೆದರಿಕೆ ಹೀಗೆ ಹಲವು ಅಂಶಗಳ ವರದಿಯನ್ನು ರಾಜ್ಯಪಾಲರು ನೀಡಿದ್ದಾರೆ.
ಕೆಲವು ಸಚಿವರು ಉದ್ದೇಶಪೂರ್ವಕವಾಗಿ ಕರ್ನಾಟಕ ವಿರೋಧಿ ರಾಜ್ಯಪಾಲರು, ಗೋ ಬ್ಯಾಕ್ ಗವರ್ನರ್ ಚಳವಳಿ ನಡೆಸಿದ್ದಾರೆ ಎಂದು ರಾಷ್ಟ್ರಪತಿ, ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯಪಾಲರು ವಿವರಣೆ ನೀಡಿದ್ದಾರೆ