Ad imageAd image

ಮುದಗಲ್ : ನಾಲ್ಕು ಮನೆ ಸರಗಳ್ಳತನ

Bharath Vaibhav
ಮುದಗಲ್ : ನಾಲ್ಕು ಮನೆ ಸರಗಳ್ಳತನ
WhatsApp Group Join Now
Telegram Group Join Now

ಮುದಗಲ್: ಇಲ್ಲಿನ ಸೋಮವಾರ ಪೇಟೆ ಹಾಗೂ ಖಾದ್ರಿ ಕಾಲೋನಿಯಲ್ಲಿ ನಾಲ್ಕು ಮನೆ ಸರಗಳ್ಳತನ ರವಿವಾರ ರಾತ್ರಿ ಜರುಗಿದೆ.

ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಹೆಚ್ಚುವರಿ ಎಸ್ ಪಿ ಜಿ. ಹರೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
4 ಮನೆ ಸರಗಳ್ಳತನದಲ್ಲಿ, ಒಂದೇ ಮನೆಯಲ್ಲಿ 20 ತೊಲಿ ಬಂಗಾರ ಕಳ್ಳತನವಾಗಿದೆ, ನಮ್ಮ ಇಲಾಖೆಯಿಂದ ಸ್ಪೆಷಲ್ ಟಿಮ್ ಮಾಡಿ ಕಳ್ಳತನ ಪ್ರಕರಣ ಪತ್ತೆ ಪ್ರಾಮಾಣಿಕವಾಗಿ ಮಾಡುತ್ತೇವೆ. ರಾತ್ರಿ ಸಮಯದಲ್ಲಿ ಸಾರ್ವಜನಿಕರಿಗೆ ಆತಂಕ ಎದುರಾದಾಗ ಪೊಲೀಸ್ ಠಾಣೆಗೆ ಕರೆಮಾಡಬೇಕು. ಮನೆಯ ಮಾಲೀಕರು ಸಿ ಸಿ ಕ್ಯಾಮೆರಾ ಹಾಕಿಕೊಳ್ಳಬೇಕು, ಮುಖ್ಯ ದ್ವಾರಗಳನ್ನು ಮಲಗುವಾಗ ಸರಿಯಾಗಿ ಹಾಕಿಕೊಳ್ಳಬೇಕು. ಪ್ರವೇಶ ದ್ವಾರದಲ್ಲಿ ಸೈರಿನ ಹಾಕಿಕೊಂಡರೆ ಅಕ್ಕ ಪಕ್ಕದ ಮನೆಯವರಿಗೆ ಎಲ್ಲರಿಗೂ ಎಚ್ಚರಿಸಿದಂತೆ ಆಗುತ್ತದೆ. ಪಟ್ಟಣದಲ್ಲಿ ವೈಫೈ ಹಾಗೂ ವೈಡ್ ಕ್ಯಾಮೆರಾಗಳ ಅಳವಡಿಕೆ ಮಾಡಲು ಸ್ಥಳೀಯ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ಮಾಡಗೇರಿಯವರಿಗೆ ಸುಚಿಸಿದರು.

ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಮ್, ಪಿಎಸ್ಐ ವೆಂಕಟೇಶ ಮಡಗೇರಿ ಸೇರಿದಂತೆ ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿಗಳು ಇದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!