Ad imageAd image

ವಿಶ್ವವಿಖ್ಯಾತ ಮಳಖೇಡ ರಾಷ್ಟಕೂಟರ ಕೋಟೆ ರಕ್ಷಣೆಗೆ ಅಗತ್ಯ: ಮುಡುಬಿ ಗುಂಡೇರಾವ

Bharath Vaibhav
ವಿಶ್ವವಿಖ್ಯಾತ ಮಳಖೇಡ ರಾಷ್ಟಕೂಟರ ಕೋಟೆ ರಕ್ಷಣೆಗೆ ಅಗತ್ಯ: ಮುಡುಬಿ ಗುಂಡೇರಾವ
WhatsApp Group Join Now
Telegram Group Join Now

ಸೇಡಂ: ಮಳಖೇಡ ಕೋಟೆಯಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು, ಕಾಡಿನಂತೆ ಬೆಳೆದ ಮುಳ್ಳು ಕಂಟಿಗಳನ್ನು ಕಡಿದು ಸ್ವಚ್ಛಗೊಳಿಸಬೇಕು, ಕನ್ನಡ ಕಟ್ಟಿದ ಕೋಟೆಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಂಶೋಧಕ ಸಾಹಿತಿ ಹಾಗೂ ಕಲಬುರಗಿ ಜಿಲ್ಲಾ ೨೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಮಳಖೇಡ ಐತಿಹಾಸಿಕ ರಾಷ್ಟಕೂಟರ ಕೋಟೆಯಲ್ಲಿ ಕನ್ನಡ ಅಭಿಮಾನಿ ಬಳಗ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.ಜಗತ್ತಿನ ನಾಲ್ಕು ಸಾಮ್ರಾಜ್ಯಗಳ ಪೈಕಿ ರಾಷ್ಟಕೂಟರ ಸಾಮ್ರಾಜ್ಯವಾಗಿತ್ತು.

ಕನ್ನಡದ ಕೀರ್ತಿಯನ್ನು ಹೆಚ್ಚಿಸಿದವರು, ಕಾವೇರಿಯಿಂದ ಮಹಾ ಗೋದಾವರಿಯವರೆಗೆ ಸಾಮ್ರಾಜ್ಯ ವಿಸ್ತರಿಸಿದವರು, ಕನ್ನಡಕ್ಕೆ ಪ್ರಥಮ ಗ್ರಂಥ ಕವಿರಾಜ ಮಾರ್ಗ ನೀಡಿದ ಹೆಗ್ಗಳಿಕೆ, ಏಕ ಶಿಲೆಯಲ್ಲಿ ಎಲ್ಲೋರದ ಕೈಲಾಸನಾಥ ದೇವಾಲಯವನ್ನು ಕಟ್ಟಿಸಿದವರು, ಪ್ರಜಾನುರಾಗಿ ದೊರೆ ಅಮೋಘವರ್ಷ ನೃಪತುಂಗ ಚಕ್ರವರ್ತಿಯು ೬೪ ವರ್ಷ ಸುಧೀರ್ಘವಾಗಿ ಆಳ್ವಿಕೆ ಮಾಡಿದ್ದು ಶ್ಲಾಘನೀಯ.

ಇಂದ್ರನ ಅಮರಾವತಿ ನಾಚಿಸುವಂತ ನಗರ ಮಳಖೇಡವಾಗಿತ್ತು, ಇಂತಹ ಅದ್ಭುತ ಇತಿಹಾಸ ಹೊಂದಿರುವ ಮಳಖೇಡ ಕೋಟೆಯ ರಕ್ಷಣೆ ಮಾಡಬೇಕು ಮತ್ತು ಇದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಕೋಟೆ ಸ್ವಚ್ಛತೆ ಅಭಿಯಾನಕ್ಕೆ ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ ಚಾಲನೆ ನೀಡಿ ಮಾತನಾಡಿ ಮಳಖೇಡ ಕೋಟೆಯ ಅಭಿವೃದ್ದಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲರು ಮತ್ತೆ ವಿಶೇಷ ಅನುದಾನ ಬಿಡುಗಡೆಗೆ ಮತ್ತು ರಾಷ್ಟಕೂಟ ಉತ್ಸವ ಆಚರಣೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಕನ್ನಡ ಅಭಿಮಾನಿ ಬಳಗ ಸಂಚಾಲಕಿ ಚಂದ್ರಕಲಾ ಅತನೂರು ಮಾತನಾಡಿ ಕನ್ನಡವನ್ನು ಕಟ್ಟಿ ಬೆಳೆಸಿದ ಕೋಟೆಯ ಸ್ಥತಿ ಅದೋಗತಿಯಾಗಿದೆ, ಕನ್ನಡ ಅಭಿಮಾನವುಳ್ಳವರೆಲ್ಲರೂ ಒಗ್ಗಟ್ಟಿನಿಂದ ಕೋಟೆ ಸ್ವಚ್ಛತೆ ಮಾಡಿ ಸುಂದರಗೊಳಿಸೋಣಾ ಎಂದರು.

‘ಕರವೇ ಅಧ್ಯಕ್ಷ ಹಣಮಂತ ಹೊಕ್ಕಳ ಮಾತನಾಡಿ ಮಳಖೇಡ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಮತ್ತು ರಾಷ್ಟಕೂಟ ಉತ್ಸವ ಆಚರಿಸಬೇಕು ಎಂದರು.

ಓಂ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ ಧರಿ ಮಾತನಾಡಿ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ನಾಡಿನ ಇತಿಹಾಸ ಸಾರುವ ಕೋಟೆ ಕೊತ್ತಲಗಳೆ ನಮ್ಮ ನಿಜವಾದ ಆಸ್ತಿಯಾಗಿದೆ ಎಂದರು.

ಈ ವೇಳೆಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷರಾದ ರಾಜಶೇಖರ ಪುರಾಣಿಕ, ಸಾಹಿತಿ ಪತ್ರಕರ್ತ ರಂಗಕರ್ಮಿ ಸಿದ್ದಲಿಂಗಯ್ಯ ಸ್ವಾಮಿ ಕೊಡಗಿಮಠ ಮಲಕೂಡ, ಪತ್ರಕರ್ತ ಸುರೇಶ್ ಬಿಜನಳ್ಳಿ, ಮಲ್ಲಪ್ಪ ಆರಬೋಳ, ದೇವು ಪುರಾಣಿಕ, ರಾಜಪ್ಪ ಮಂಗಾ, ಮಿರ್ಜಾ ಸರಕಾರ, ಜಗದೀಶ ಹಿರೇಮಠ, ಪ್ರವಾಸಿ ಮಿತ್ರ ಅಶೋಕ ಮುಂತಾದವರಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!